ಯುವಕನನ್ನು ಕೊಂದು ಮೃತದೇಹವನ್ನು ಬಾವಿಗೆಸೆದ ಪ್ರಕರಣ: ಇಬ್ಬರು ಕಸ್ಟಡಿಗೆ, ಇಂದೇ ಬಂಧನ ಸಾಧ್ಯತೆ

0
61

ಕಾಸರಗೋಡು:  ಚೆಟ್ಟುಂಗುಳಿ ಯಲ್ಲಿ ಈ ಹಿಂದೆ ವಾಸಿಸುತ್ತಿದ್ದು ಬಳಿಕ ಮಧೂರು ಪಟ್ಲಕ್ಕೆ ವಾಸ್ತವ್ಯ ಬದಲಾಯಿಸಿದ ಶೈನ್ ಕುಮಾರ್ ಯಾನೆ ಶಾನವಾಸ್ (೨೭) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಕಾಸರಗೋಡು ಪೊಲೀಸರು ವಶಕ್ಕೆ ತೆಗೆದುಕೊಂ ಡಿದ್ದಾರೆ. ಇದರಲ್ಲಿ ಓರ್ವ ಕಾಸರಗೋಡು ಮತ್ತು ಇನ್ನೋರ್ವ ಕುಂಬಳೆ ನಿವಾಸಿಯಾಗಿ ರುವುದಾಗಿ ತಿಳಿಯಲಾಗಿದೆ. ಮೂವರು ಸೇರಿ ಶಾನವಾಸ್‌ನನ್ನು ಕೊಲೆಗೈದಿರು ವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಜಾ ವ್ಯವಹಾರದ ವಿಷಯವೇ ಕೊಲೆಗೆ ಕಾರಣವಾಗಿದೆ ಎಂಬ ಪರೋಕ್ಷ ಸುಳಿಯನ್ನು ಪೊಲೀಸರು ನೀಡಿದ್ದಾರೆ.  ಕಸ್ಟಡಿಗೊಳಗಾದವರನ್ನು ಪೊಲೀಸರು ಸಮಗ್ರ ವಿಚಾರಣೆಗೊಳ ಪಡಿಸುತ್ತಿದ್ದು ಇಂದು ಸಂಜೆಯೊಳ ಗಾಗಿ ಅವರ ಬಂಧನ ದಾಖಲಿಸಿ ಕೊಳ್ಳುವ ಸಾಧ್ಯತೆ ಇದೆ.

ಕೇಸೊಂದಕ್ಕೆ ಸಂಬಂಧಿಸಿ ಸೆಪ್ಟಂಬರ್ ೨೬ರಂದು ಶಾನವಾಸ್ ಕಾಸರಗೋಡು ನ್ಯಾಯಾಲಯದಲ್ಲಿ ಹಾಜರಾಗಿದ್ದನು. ಬಳಿಕ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದು, ಆ ವಿಷಯವನ್ನು ಆತನ ತಾಯಿ ಪ್ರಮೀಳಾ ಮೌಖಿಕವಾಗಿ ವಿದ್ಯಾನಗರ ಪೊಲೀಸರಿಗೆ ತಿಳಿಸಿದ್ದರು. ಈ ಮಧ್ಯೆ ಅಕ್ಟೋಬರ್ ೨೦ರಂದು ನಗರದ ನಾಯಕ್ಸ್ ರಸ್ತೆಯ ದಿನೇಶ್ ಬೀಡಿ ಕಂಪೆನಿಯ ಪಕ್ಕದ ಪಾಳು ಬಾವಿಯಲ್ಲಿ ಶಾನವಾಸ್‌ನ ಮೃತದೇಹ ಜೀರ್ಣಿಸಿ ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.  ಬಾವಿ ಸಮೀಪದಲ್ಲಿ ಶಾನವಾಸ್‌ನದೆಂದು ಹೇಳಲಾಗುತ್ತಿರು ವ ಕೂಲಿಂಗ್‌ಗ್ಲಾಸ್ ಮತ್ತು ಚೈನ್ ತುಂಡಾಗಿ ಬಿದ್ದ ಸ್ಥಿತಿಯಲ್ಲೂ ಪೊಲೀ ಸರು ಪತ್ತೆಹಚ್ಚಿದ್ದರು. ಅದರಿಂದಾಗಿ ಆ ಸಾವಿನ ಬಗ್ಗೆ ಪೊಲೀಸರಿಗೆ ಅಂದೇ ಸಂಶಯ ಹುಟ್ಟಿಕೊಂಡಿತ್ತು. ಬಳಿಕ ಪೊಲೀಸರು ನಡೆಸಿದ ಸಮಗ್ರ ತನಿಖೆ ಹಾಗೂ ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆಸಿದ ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಆಧಾರದಲ್ಲಿ ಸಾವು ಕೊಲೆಯಾಗಿದೆ ಎಂದು ಸ್ಪಷ್ಟಗೊಂ ಡಿತ್ತು. ಚಾಕುವಿನಿಂದ ಇರಿದು ಕೊಲೆ ನಡೆಸಲಾಗಿತ್ತೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸ್ಪಷ್ಟಗೊಂಡಿ ತ್ತು. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಕೊಲೆಗೀಡಾದ ಶಾನವಾಸ್‌ನನ್ನು ವಿರುದ್ಧ ವಿದ್ಯಾನಗರ ಪೊಲೀಸರು ಈ ಹಿಂದೆ ಕಾಪಾ ಕಾನೂನು ಹೇರಿ ಬಂಧಿಸಿದ್ದರು.

 

NO COMMENTS

LEAVE A REPLY