ಧರ್ಮತ್ತಡ್ಕ- ಬಾಯಾರು ರಸ್ತೆ ಬದಿ ಹೊಂಡಗಳು: ವಾಹನ ಪ್ರಯಾಣಿಕರಲ್ಲಿ ಭೀತಿ

ಪೈವಳಿಕೆ: ಧರ್ಮತ್ತಡ್ಕ- ಸಜಂಕಿಲ- ಬಾಯಾರು ಲೋಕೋಪಯೋಗಿ ನೂತನ ರಸ್ತೆಯ ಬದಿ ವಿವಿಧೆಡೆ ಹೊಂಡಗಳಿದ್ದು, ಇದು ವಾಹನ ಪ್ರಯಾಣಿಕರಿಗೆ ಭೀತಿಯೊಡ್ಡುತ್ತಿದೆ. ಪ್ರತೀದಿನ ಬಸ್ ಸಹಿತ ನೂರಾರು ವಾಹನಗಳು ಸಂಚರಿಸುವ ಪ್ರಧಾನ ರಸ್ತೆ ಇದಾಗಿದೆ. ರಸ್ತೆ ನಿರ್ಮಾಣ ವೇಳೆ ಅಪಾಯಕಾರಿ ರಸ್ತೆಯ ಬದಿ ಹೊಂಡವಿರುವಲ್ಲಿ ತಡೆಬೇಲಿ ನಿರ್ಮಿಸದಿರುವುದು ಅಪಾಯಭೀತಿಗೆ ಕಾರಣವಾಗಿದೆ.  ಸಜಂಕಿಲ, ಸರ್ಕುತ್ತಿ ಸಹಿತ ವಿವಿಧೆಡೆ ರಸ್ತೆ ಬದಿ ಹೊಂಡಗಳಿದ್ದು, ಇದು ವಾಹನ ಪ್ರಯಾಣಿಕರಲ್ಲಿ ಆತಂಕ ಮೂಡಿಸುತ್ತಿದೆ. ಸಂಬಂಧಪಟ್ಟ ಗುತ್ತಿಗೆದಾರ ಕೂಡಲೇ ರಸ್ತೆ ಬದಿ ಸಮತಟ್ಟುಗೊಳಿಸಬೇಕು ಅಥವಾ ತಡೆಬೇಲಿ ನಿರ್ಮಿಸಿ ಭದ್ರತೆ ಒದಗಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

You cannot copy contents of this page