ಆಟೋ ಚಾಲಕನಿಗೆ ಹಲ್ಲೆಗೈದ ಆರೋಪಿಗೆ ರಿಮಾಂಡ್

ಕುಂಬಳೆ:  ಆಟೋ ಚಾಲಕನಿಗೆ ಸೋಡಾ ಬಾಟ್ಲಿಯಿಂದ ತಲೆಗೆ ಹೊಡೆದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಬಂಧಿತನಾದ ಆರೋಪಿಗೆ ನ್ಯಾಯಾಲಯ ರಿಮಾಂ ಡ್ ವಿಧಿಸಿದೆ.  ಕುಂಬಳೆ ಆಟೋ ಸ್ಟ್ಯಾಂಡ್‌ನ ಚಾಲಕ ಕೊಯಿಪ್ಪಾಡಿ ಕುಂಟಂಗೇರಡ್ಕದ ಸತೀಶ (52) ಎಂಬವರ ಮೇಲೆ ಮೊನ್ನೆ ಸಂಜೆ ಆಕ್ರಮಣ ನಡೆದಿದೆ. ಈ ಪ್ರಕರಣದಲ್ಲಿ ಬಂಧಿತನಾದ  ಕೊಯಿಪ್ಪಾಡಿ ವಿಲ್ಲೇಜ್‌ನ ಫಾರೂಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ತನ್ನನ್ನು ಉಚಿತವಾಗಿ ಮನೆಗೆ ತಲುಪಿಸಬೇಕೆಂದು ಫಾರೂಕ್ ಒತ್ತಾಯಿಸಿದ್ದು, ಆದರೆ ಅದಕ್ಕೆ ಆಟೋ ಚಾಲಕ ಸಿದ್ದವಾಗದ ದ್ವೇಷದಿಂದ ಸತೀಶರ ಮೇಲೆ  ಫಾರೂಕ್  ಹಲ್ಲೆ ನಡೆಸಿದ್ದಾನೆಂದು ದೂರಲಾಗಿದೆ.

You cannot copy contents of this page