ಯುವ ದೈವ ಕಲಾವಿದ ನಿಧನ

ಅಡೂರು: ಯುವ ದೈವ ಕಲಾವಿದ ವಿಜಯನ್ ಪಾಂಡಿ ಬಯಲು (45) ಹೃದಯಾಘಾತದಿಂದ ನಿಧನ ಹೊಂದಿದರು. ಕರ್ನಾಟಕದ ವಿಟ್ಲದಲ್ಲಿ ವಾಸಿ ಕಂಪೆನಿಯೊಂದರಲ್ಲಿ ಇವರು ಕೆಲಸ ನಿರ್ವಹಿಸುತ್ತಿದ್ದರು. ವಿಟ್ಲದಲ್ಲಿ ಇವರಿಗೆ ಹೃದಯಾಘಾತವುಂಟಾಗಿ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ನಿನ್ನೆ ರಾತ್ರಿ ಪಾಂಡಿ ಬಯಲಿಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಯಿತು.  ಹಿರಿಯ ದೈವ ಕಲಾವಿದ ಕರಿಯ  ಎಂಬವರ ಪುತ್ರನಾದ ಮೃತರು ತಾಯಿ ಸೀತು, ಪತ್ನಿ ವಾಣಿ, ಸಹೋದರ ಸಹೋದರಿ ಯರಾದ ಹರೀಶ್, ಮೀನಾಕ್ಷಿ, ರೋಹಿಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page