ಉಪ್ಪಳ ಗ್ರಾಂಡ್ ಎಕ್ಸ್‌ಫೋ ನಾಳೆಯಿಂದ

ಕುಂಬಳೆ: ಯೂನಿವೆಂಟ್ ಈವಂಟ್ ಮೆನೇಜ್‌ಮೆಂಟ್ ಉಪ್ಪಳದಲ್ಲಿ ಆಯೋಜಿಸುವ ಉಪ್ಪಳ ಗ್ರಾಂಡ್ ಎಕ್ಸ್‌ಪೋವನ್ನು ನಾಳೆ ಸಂಜೆ ಕೈಕಂಬದಲ್ಲಿ ಶಾಸಕ ಎಕೆಎಂ ಅಶ್ರಫ್ ಉದ್ಘಾ ಟಿಸುವರು. ಮಂಗಲ್ಪಾಡಿ ಪಂ. ಅಧ್ಯಕ್ಷೆ ರುಬೀನಾ ನೌಫಲ್ ಅಧ್ಯಕ್ಷತೆ ವಹಿಸುವರು. ಜ. ೮ರ ವರೆಗೆ ಎಕ್ಸ್‌ಪೋ ನಡೆಯಲಿದೆ. ಫ್ಲವರ್ ಶೋ, ಪೆಟ್‌ಶೋ, ಸ್ಟೇಜ್ ಕಾರ್ಯಕ್ರಮಗಳು, ನರ್ಸರಿಗಳು, ವಿವಿಧ ರೀತಿಯ ಸ್ಟಾಲ್‌ಗಳು ಎಕ್ಸ್‌ಪೋದಲ್ಲಿರಲಿದೆ. ಆಕರ್ಷಕ  ರೈಡ್, ಖ್ಯಾತ ಕಲಾವಿದರ ಕಾರ್ಯಕ್ರಮಗಳು ಇರಲಿದೆ. ೧೨ ವರ್ಷದವರೆಗಿನ ಮಕ್ಕಳಿಗೆ ಉಚಿತ ಪ್ರವೇಶವಾಗಿದ್ದು,  ಮಕ್ಕಳಿಗೆ ರೈಡ್‌ನಲ್ಲಿ  ೪೦ ಶೇ. ರಿಯಾಯಿತಿ ಇದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

You cannot copy contents of this page