ಶಾಸಕರ ಅನಾಸ್ಥೆಯಿಂದ ಮಲೆಯಾಳಂ ಭಾಷಾ ಮಸೂದೆ ಜ್ಯಾರಿಯಾಗಿದೆ- ಕೆ. ಸುರೇಂದ್ರನ್ ಆರೋಪ

ಹೊಸಂಗಡಿ: ಕೇರಳದಲ್ಲಿ ಎಡಂರಂಗ ಸರಕಾರ ಭಾಷಾ ಮಸೂದೆ ಜ್ಯಾರಿಗೆ ತಂದಿರುವುದು  ಭಾಷಾ ಅಲ್ಪಸಂಖ್ಯಾತರಾದ ಗಡಿನಾಡು ಕನ್ನಡಿಗರಿಗೆ ಅನ್ಯಾಯವಾಗಲಿದೆ ಎಂದು ಬಿಜೆಪಿ ರಾಜ್ಯ ಮಾಜಿ ಅಧ್ಯಕ್ಷ ಕೆ. ಸುರೇಂದ್ರನ್ ನುಡಿದರು. ಇನ್ನು ಮುಂದೆ ರಾಜ್ಯದ ಶಾಲೆಗಳಲ್ಲಿ ಕಡ್ಡಾಯ ಮಲೆಯಾಳಂ ಕಲಿಕೆ ಜ್ಯಾರಿಯಾಗಲಿದೆ. ಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಲಿದೆ. ಸರಕಾರಿ ಉದ್ಯೋಗ ಗಡಿನಾಡ ಕನ್ನಡಿಗರಿಗೆ ಮರೀಚಿಕೆಯಾಗಲಿದೆ ಎಂದು, ಇದಕ್ಕೆ ವಿಧಾನಸಭೆಯಲ್ಲಿ ಭಾಷಾ ಮಸೂದೆ ಮಂಡನೆಯಾಗುವಾಗ ಗೈರುಹಾಜರಾದ ಶಾಸಕ ಎಕೆಎಂ ಅಶ್ರಫ್‌ರ ಬೇ ಜವಾಬ್ದಾರಿ ಕಾರಣವೆಂದು ಸುರೇಂದ್ರನ್ ದೂರಿದರು.

ಕಡ್ಡಾಯ ಮಲೆಯಾಳ ಭಾಷಾ ಮಸೂದೆ ವಿರುದ್ಧ ಮಾತನಾಡದ ಮಂಜೇಶ್ವರ ಹಾಗೂ ಕಾಸರಗೋಡು ಶಾಸಕರ ಕನ್ನಡ ವಿರೋಧಿ ನೀತಿಗೆ ಕನ್ನಡಿಗರು ಉತ್ತರ ನೀಡಬೇಕೆಂದು ಸುರೇಂದ್ರನ್ ಕರೆ ನೀಡಿದರು. ಮಂಜೇಶ್ವರದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಅವರು ಮಾತನಾಡಿದರು. ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಮಣಿಕಂಠ ರೈ, ವಿಜಯ ರೈ, ಎ.ಕೆ. ಕಯ್ಯಾರ್, ಸುನಿಲ್ ಅನಂತಪುರ, ವಸಂತ ಮಯ್ಯ ಉಪಸ್ಥಿತರಿದ್ದರು.

RELATED NEWS

You cannot copy contents of this page