ಉಪ್ಪಳ ಬಳಿ ಲಾರಿ ತಡೆದು ನಿಲ್ಲಿಸಿ ದರೋಡೆ: ಚಾಲಕನಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ 1.64 ಲಕ್ಷ ರೂ.ಅಪಹರಣ
ಉಪ್ಪಳ: ಮೀನಿನ ಲಾರಿಯನ್ನು ತಡೆದು ನಿಲ್ಲಿಸಿ ಚಾಲಕನಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿದ ಬಳಿಕ 1.64 ಲಕ್ಷ ರೂಪಾಯಿ ದರೋಡೆ ನಡೆಸಿದ ಘಟನೆ ಇಂದು ಮುಂಜಾನೆ ಉಪ್ಪಳ ಬಳಿಯ ಅಟ್ಟೆಗೋಳಿಯಲ್ಲಿ ನಡೆದಿದೆ.
ಪೈವಳಿಕೆ ನಿವಾಸಿಯಾದ ಯೂಸಫ್‌ರನ್ನು ತಂಡವೊಂದು ದರೋಡೆ ನಡೆಸಿದೆಯೆಂದು ದೂರಲಾ ಗಿದೆ. ಯೂಸಫ್ ಎಂದಿನಂತೆ ಇಂದು ಮುಂಜಾನೆ ಕೂಡಾ ಮಂಗಳೂರಿನಿಂದ ಮೀನು ತರಲೆಂದು ಲಾರಿ ಸಹಿತ ತೆರಳು ತ್ತಿದ್ದರು. ಅಟ್ಟೆಗೋಳಿಗೆ ತಲುಪಿದಾಗ ಬೈಕ್‌ನಲ್ಲಿ ತಲುಪಿದ ಇಬ್ಬರು ಲಾರಿಗೆ ತಡೆಯೊಡ್ಡಿದ್ದಾರೆ. ಬಳಿಕ ಯೂಸಫ್‌ರಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ ಹಣ ಕೇಳಿದೆ. ಹಣ ಇಲ್ಲವೆಂದು ತಿಳಿಸಿದಾಗ ಚಾಲಕನ ಕುತ್ತಿಗೆಗೆ ಚಾಕು ಇರಿಸಿ ಬೆದರಿಕೆಯೊಡ್ಡಿದ ಬಳಿಕ ಲಾರಿಯಲ್ಲಿದ್ದ ಹಣವನ್ನು ವಶಪಡಿಸಿಕೊಂಡಿರುವುದಾಗಿ ದೂರಲಾಗಿದೆ. ದರೋಡೆ ಬಳಿಕ ದುಷ್ಕರ್ಮಿಗಳು ಬೈಕ್‌ನಲ್ಲೇ ಪರಾರಿ ಯಾಗಿದ್ದಾರ. ಅನಂತರ ಈ ಬಗ್ಗೆ ಯೂಸಫ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ತನಿಖೆ ಆರಂಭಿಸಿದ ಪೊಲೀಸರು ವಿವಿಧೆಡೆಗಳಲ್ಲಿ ರುವ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿ ಸುತ್ತಿದ್ದಾರೆ. ದೃಶ್ಯಗಳು ಲಭಿಸಿದರೆ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಬಹು ದೆಂಬ ನಿರೀಕ್ಷೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.