ಎಂಡೋಸಲ್ಫಾನ್: ೧೦೩೧ ಮಂದಿಯನ್ನು ಯಾದಿಯಲ್ಲಿ ಸೇರಿಸಲು ಆಗ್ರಹಿಸಿ ಕಲೆಕ್ಟ್ರೇಟ್ ಧರಣಿ ನಾಳೆ

ಕಾಸರಗೋಡು: ಯಾದಿಯಲ್ಲಿ ಸೇರಿಸಿ ವಿನಾಕಾರಣ ಹೊರತು ಪಡಿಸಿದ ೧೦೩೧ ಎಂಡೋಸಲ್ಫಾನ್ ಸಂತ್ರಸ್ತರನ್ನು ಮತ್ತೆ ಸೇರಿಸಬೇಕೆಂದು ಆಗ್ರಹಿಸಿ ನಾಳೆ ಬೆಳಿಗ್ಗೆ ೯ರಿಂದ ಸಂಜೆ ೫ ಗಂಟೆವರೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸತ್ಯಾಗ್ರಹ ನಡೆಯಲಿದೆ. ಸತ್ಯಾಗ್ರಹವನ್ನು ಕವಿ ನಾರಾಯಣನ್ ಉದ್ಘಾಟಿಸುವರು. ಜನಪ್ರತಿನಿಧಿಗಳು, ವಿವಿಧ ರಾಜಕೀಯ, ಸಾಂಸ್ಕೃತಿಕ ಮುಖಂಡರು ಭಾಗವಹಿಸುವರು.

೨೦೧೭ ಎಪ್ರಿಲ್ ೫ರಿಂದ ೯ರವರೆಗೆ ಐದು ಸ್ಥಳಗಳಲ್ಲಾಗಿ ನಡೆದ ಪ್ರತ್ಯೇಕ ಮೆಡಿಕಲ್ ಕ್ಯಾಂಪ್‌ನಿಂದ ೧೯೦೫ ಎಂಡೋಸಲ್ಫಾನ್ ಸಂತ್ರಸ್ತರನ್ನು ಯಾದಿಯಲ್ಲಿ ಸೇರಿಸಲಾಗಿದ್ದರೂ ಯಾವುದೇ ಕಾರಣವಿಲ್ಲದೆ ಬಳಿಕ ೨೮೭ ಮಂದಿಯ ಯಾದಿಯಾಗಿ ಕಡಿಮೆ ಮಾಡಲಾಗಿದೆ. ತಾಯಂದಿರು ನಡೆಸಿದ ಆಂದೋಲನದಂಗವಾಗಿ ೭೬ ಮಂದಿಯನ್ನು ಮತ್ತೆ ಸೇರಿಸಲಾಗಿದೆ. ೨೦೧೯ ಜನವರಿ ೩೦ರಂದು ಸೆಕ್ರೆಟರಿಯೇಟ್ ಮುಂಭಾಗ ನಡೆದ ತಾಯಂದಿರ ಉಪವಾಸ ಮುಷ್ಕರದ ಹಿನ್ನೆಲೆಯಲ್ಲಿ ೧೮ ವರ್ಷದ ಕೆಳಗಿನ ೫೧೧ ಮಕ್ಕಳನ್ನು ಯಾದಿಯಲ್ಲಿ ಮತ್ತೆ ಸೇರಿಸಲಾಯಿತು. ಆದರೆ ಉಳಿದ ೧೦೩೧ ಮಂದಿ ಈಗಲೂ ಯಾದಿಯಿಂದ ಹೊರಗಿದ್ದಾರೆಂದು ಎಂಡೋಸಲ್ಫಾನ್ ಮುಷ್ಕರ ಸಮಿತಿ  ತಿಳಿಸಿದೆ. ಇವರನ್ನು ಯಾದಿಯಲ್ಲಿ ಸೇರಿಸಬೇಕೆಂದು ಆಗ್ರಹಿಸಿ ಹಲವು ಬಾರಿ ಮುಖ್ಯಮಂತ್ರಿ ಸಹಿತ ಮನವಿ ನೀಡಿದರೂ ಯಾವುದೇ ಕ್ರಮ ಉಂಟಾಗದ ಹಿನ್ನೆಲೆಯಲ್ಲಿ ತಾಯಂದಿರು ಮತ್ತೆ ಆಂದೋಲನಕ್ಕೆ ಇಳಿದಿರುವುದಾಗಿ ಸಮಿತಿ ತಿಳಿಸಿದೆ. ಈ ಬಗ್ಗೆ ಎಂ.ಕೆ. ಅಜಿತಾ, ಪಿ. ಶೈನಿ, ಗೀತಾ ಚೆಮ್ನಾಡ್, ಪ್ರಮೀಳ ಚಂದ್ರನ್, ಅವ್ವಮ್ಮ, ತಸ್ರಿಯ, ಸರಸ್ವತಿ ಅಜಾನೂರ್ ಮೊದಲಾದವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page