ಎಂ.ವಿ. ಬಾಲಕೃಷ್ಣನ್ ಮಾಸ್ತರ್ ಪ್ರಚಾರ: ಮುಖಂಡರ ದಂಡು ಜಿಲ್ಲೆಗೆ
ಮಂಜೇಶ್ವರ: ಕಾಸರಗೋಡು ಲೋಕಸಭಾ ಕ್ಷೇತ್ರದ ಎಡರಂಗ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ಮಾಸ್ತರ್ರ ಗೆಲುವಿಗಾಗಿ ಎಡರಂಗ ನೇತಾರರ ವಿವಿಧ ಕಾರ್ಯಕ್ರಮಗಳು ಚುನಾವಣಾ ರ್ಯಾಲಿ ವಿವಿಧ ದಿನಗಳಲ್ಲಿ ನಡೆಯಲಿದೆ. ಸಿಪಿಎಂ ಪೋಲಿಟ್ ಬ್ಯೂರೋ ಸದಸ್ಯ ಎಂ.ಎ. ಬೇಬಿ ನಾಳೆ ೩ ಗಂಟೆಗೆ ಒಡಯಂಚಾಲ್, ೫ ಗಂಟೆಗೆ ಚೆರುಪುಳ, ೬ ಗಂಟೆಗೆ ಕೋರಮ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚ್ಚೂರಿ ೧೬ರಂದು ೧೦ ಗಂಟೆಗೆ ಪಾಯಂಗಡಿ, ಎನ್.ಸಿ.ಪಿ ರಾಜ್ಯ ಅಧ್ಯಕ್ಷ ಪಿ.ಸಿ. ಚಾಕೋ ಎಪ್ರಿಲ್ ೧೬ರಂದು ೩.೩೦ಕ್ಕೆ ಪನತ್ತಡಿ, ೫.೩೦ಕ್ಕೆ ವೆಳ್ಳರಿಕುಂಡ್, ಮುಖ್ಯಮಂತ್ರಿ ಪಿಣ ರಾಯಿ ವಿಜಯನ್ ಎಪ್ರಿಲ್ ೨೧ರಂದು ೧೦ ಗಂಟೆಗೆ ಪಾಲಕುನ್ನು, ೪ ಗಂಟೆಗೆ ತ್ರಿಕ್ಕರಿಪುರ, ೫.೩೦ಕ್ಕೆ ಪಯ್ಯನ್ನೂರು, ಪ್ರಕಾಶ್ ಕಾರಾಟ್ ಎಪ್ರಿಲ್ ೨೨ರಂದು ೧೦ ಗಂಟೆಗೆ ಕುಂಬಳೆ, ೪ ಗಂಟೆಗೆ ಚೆರ್ಕಳ, ೫.೩೦ಕ್ಕೆ ನೀಲೇಶ್ವರ, ಬಿಜು ಕೃಷ್ಣನ್ ಎಪ್ರಿಲ್ ೨೨ರಂದು ೪.೩೦ಕ್ಕೆ ಪುಲ್ಲೂರು, ೫.೩೦ಕ್ಕೆ ಅಜನೂರು ಮಾಳ ಕಂಡಂ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜ ಎಪ್ರಿಲ್ ೨೩ರಂದು ೪.೩೦ಕ್ಕೆ ಚೆರುಪುಳ, ೬.೩೦ಕ್ಕೆ ಪೆರಳಂನಲ್ಲಿ ಮಾತ ನಾಡುವರು ಎಂದು ಎಡರಂಗ ಕಾಸರ ಗೋಡು ಲೋಕಸಭಾ ಕ್ಷೇತ್ರ ಸಮಿತಿ ಕನ್ವೀನರ್ ಕೆ.ಪಿ. ಸತೀಶ್ಚಂದ್ರನ್ ತಿಳಿಸಿದ್ದಾರೆ.