ಎಡನೀರು ಸ್ವಾಮೀಜಿಯ ಕಾರಿಗೆ ಹಾನಿ : ಕುಂಬಳೆಯಲ್ಲಿ ಬೃಹತ್ ಪ್ರತಿಭಟನೆ

ಕುಂಬಳೆ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ವಾಹನ ವಿರುದ್ಧ ನಡೆದ ದಾಳಿಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ ಭಜರಂಗದಳ ಮಂಜೇಶ್ವರ ಪ್ರಖಂಡ ಇದರ ವತಿಯಿಂದ ನಿನ್ನೆ ಕುಂಬಳೆಯಲ್ಲಿ ಬೃಹತ್ ಪ್ರತಿಭಟನೆ ಜರಗಿತು. ಕುಂಬಳೆ ಜಯಮಾರುತಿ ವ್ಯಾಯಾಮ ಶಾಲೆ ಬಳಿಯಿಂದ ಪೇಟೆ ತನಕ ಮೆರವಣಿಗೆ ನಡೆಯಿತು. ಭಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು ದಿಕ್ಸೂಚಿ ಭಾಷಣ ಮಾಡಿದರು. ಮುಖಂಡರಾದ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಸುರೇಶ್ ಶೆಟ್ಟಿ ಪರಂಕಿಲ, ರಂಜಿತ್ ಕೋಡಿಬೈಲು, ಕಿಶೋರ್ ಕುಂಬಳೆ, ಶ್ಯಾಮ್ ಪ್ರಸಾದ್ ನಾಯ್ಕಾಪು ಭಾಗವಹಿಸಿದರು.

RELATED NEWS

You cannot copy contents of this page