ಕಲ್ಲಿಕೋಟೆ ಲೋಕಸಭಾ ಕ್ಷೇತ್ರದಲ್ಲಿ ಪ್ರಬಲ ತ್ರಿಕೋನ ಸ್ಪರ್ಧೆ

ಕಲ್ಲಿಕೋಟೆ: ರಾಜ್ಯದ ಇತರ ಲೋಕಸಭಾ ಕ್ಷೇತ್ರಗಳ ಹಾಗೆ ಈ ಲೋಕಸಭಾ ಚುನಾವಣೆಯಲ್ಲಿ ಕಲ್ಲಿಕೋಟೆ ಲೋಕಸಭಾ ಕ್ಷೇತ್ರವೂ ಎಲ್ಲರ ಒಂದು ಪ್ರಧಾನ ಕೇಂದ್ರ ಬಿಂದುಗಳಲ್ಲೊಂದಾಗಿ ಮಾರ್ಪಟ್ಟಿದೆ.

ಬಾಲುಶ್ಶೇರಿ, ಏಲತ್ತೂರು, ಕಲ್ಲಿಕೋಟೆ ನೋರ್ತ್, ಕಲ್ಲಿಕೋಟೆ ಸೌತ್, ಬೆಪೂರು, ಕುನ್ನುಮಂಗಲಂ ಮತ್ತು ಕೊಡುವಳ್ಳಿ ಎಂಬೀ ವಿಧಾನಸಭಾ ಕ್ಷೇತ್ರಗಳು ಕಲ್ಲಿಕೋಟೆ ಲೋಕಸಭಾ ಕ್ಷೇತ್ರದಲ್ಲಿ ಒಳಗೊಂಡಿದೆ.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಯುಡಿಎಫ್ (ಕಾಂಗ್ರೆಸ್)ನ ಎಂ.ಕೆ. ರಾಘವನ್ ಇಲ್ಲಿ ಗೆದ್ದುಕೊಂಡಿದ್ದರು. ಅವರಿಗೆ ೪೯೩೪೪೪ ಮತಗಳು ಲಭಿಸಿದರೆ, ಎಡರಂಗ ಉಮೇದ್ವಾರ ಸಿಪಿಎಂನ ಎ. ಪ್ರದೀಪ್ ಕುಮಾರ್‌ಗೆ ೪೦೮೨೧೯ ಮತಗಳು ಲಭಿಸಿದ್ದವು. ಬಿಜೆಪಿ ಉಮೇದ್ವಾರ ನ್ಯಾಯವಾದಿ ಪ್ರಕಾಶ್ ಬಾಬುರಿಗೆ ೧,೬೧,೨೧೬ ಮತಗಳು ಲಭಿಸಿದ್ದವು. ೨೦೧೪ರಲ್ಲಿ  ಈ ಕ್ಷೇತ್ರದಲ್ಲಿ ಬಿಜೆಪಿ ಉಮೇದ್ವಾರರಾಗಿ ಸಿ.ಕೆ. ಪದ್ಮನಾಭನ್ ರಿಗೆ ೧,೧೫,೭೬೦ ಮತಗಳು ಲಭಿಸಿದ್ದವು, ೨೦೧೯ರ ಚುನಾವಣೆಯಲ್ಲಿ ಬಿಜೆಪಿಗೆ ಲಭಿಸಿದ ಮತಗಳ ಸಂಖ್ಯೆ ೧೬೧,೨೧೬ ಕ್ಕೇರುವ ಮೂಲಕ ಅದು ಈ ಕ್ಷೇತ್ರದಲ್ಲಿ ಬಿಜೆಪಿಯೂ ಒಂದು ಪ್ರಬಲ ಪಕ್ಷ ವನ್ನಾಗಿ ಮೂಡಿ ಬರತೊಡಗಿದೆ ಎಂಬು ವುದನ್ನು ಸೂಚಿಸಿದೆ. ಅಲ್ಪಸಂಖ್ಯಾತರ ಅತಿ ನಿರ್ಣಾಯಕ ಪಾತ್ರವನ್ನು ಕಲ್ಲಿಕೋ ಟೆ ಲೋಕಭಸಭಾ ಕ್ಷೇತ್ರ ಹೊಂದಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುಡಿಎಫ್ ಉಮೇದ್ವಾರರನ್ನಾಗಿ ಹಾಲಿ ಸಂಸದ ಕಾಂಗ್ರೆಸ್‌ನ ಎಂ.ಕೆ. ರಾಘವನ್‌ರನ್ನೇ ಮತ್ತೆ ಕಣಕ್ಕಿಳಿಸಲಾಗಿದೆ. ಇನ್ನು ಎಡರಂಗ ತನ್ನ ಉಮೇದ್ವಾರರನ್ನಾಗಿ ಸಿಐಟಿಯು ನೇತಾರ ಎಳಮರ ಕರೀಮ್ ಸ್ಪರ್ಧಿಸುತ್ತಿದ್ದಾರೆ.

ಎನ್‌ಡಿಎ ಉಮೇದ್ವಾರರಾಗಿ  ಬಿಜೆಪಿಯ ಹಿರಿಯ ನೇತಾರ ಎಂ.ಟಿ. ರಮೇಶ್ ಕಣದಲ್ಲಿದ್ದಾರೆ.  ೨೦೦೯ ಮತ್ತು ೨೦೧೪ರಲ್ಲಿ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್‌ನ ಎಂ.ಕೆ. ರಾಘವನ್ ಗೆದ್ದಿದ್ದರು. ಆದ್ದರಿಂದ ಈ ಲೋಕಸಭಾ  ಕ್ಷೇತ್ರ ದಲ್ಲಿ ಈ ಸಲ ತನ್ನ ಗೆಲುವು ಸುನಿಶ್ಚಿತ ಎಂಬ ತುಂಬು ನಿರೀಕ್ಷೆಯನ್ನು ಎಂ.ಕೆ. ರಾಘವನ್ ವ್ಯಕ್ತಪಡಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಕಲ್ಲಿಕೋಟೆ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಹೆಚ್ಚಿನ ಎಲ್ಲಾ ವಿಧಾನ ಸಭೆಗಳಲ್ಲೂ ಎಡರಂಗವೇ ಗೆದ್ದಿದೆ. ಆದ್ದರಿಂದ ಈ ಲೋಕಸಭಾ ಚುನಾ ವಣೆಯಲ್ಲಿ ಗೆಲುವು ನನ್ನ ಪರವಾಗಲಿದೆ ಎಂದು ಎಡರಂಗ ಉಮೇದ್ವಾರ ಎಳಮರ ಕರೀಂ ಹೇಳಿದ್ದಾರೆ. ಆದರೆ ದೇಶದ ರಾಜಕೀಯ ಚಿತ್ರಣ ಇಂದು ಬದಲಾಗಿದೆ. ಕನಿಷ್ಟ ಹೆರರಿಗಾದರೂ ಬಿಜೆಪಿ ಇಲ್ಲದ ಹಲವು ರಾಜ್ಯಗಳಲ್ಲಿ ಇಂದು ಬಿಜೆಪಿ ಗೆದ್ದು ಅಧಿಕಾರ ನಡೆಸುತ್ತಿದೆ. ಅದು ಕೇರಳದಲ್ಲೂ ಈಗ ಪ್ರತಿಫಲಿಸತೊಡಗಿದೆ. ಆದ್ದರಿಂದ ಅದು ಕಲ್ಲಿಕೋಟೆ ಲೋಕಸಭಾ ಕ್ಷೇತ್ರದಲ್ಲಿ ನನ್ನ ಗೆಲುವಿಗೂ ಪೂರಕವಾಗಲಿದೆ ಎಂದು ಬಿಜೆಪಿ ಉಮೇದ್ವಾರ ಎಂ.ಟಿ. ರಮೇಶ್ ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page