ಕೇಸರೀಕರಣ ವಿರುದ್ಧ ಎಡಪಕ್ಷ ಬೆಂಬಲಿತ ಸಂಘಟನೆಗಳಿಂದ ಶಿಕ್ಷಣ ಸಂರಕ್ಷಣೆ ಒಕ್ಕೂಟ

ಮಂಜೇಶ್ವರ: ವಿ.ವಿ.ಗಳನ್ನು ಕೇಸರೀಕರಣಗೊಳಿಸಲಿರುವ ಯತ್ನವನ್ನು ಉಪೇಕ್ಷಿಸಬೇಕು. ಚಾನ್ಸಲರ್ ನೀತಿ, ಕಾನೂನು ಪಾಲಿಸಬೇಕು ಮೊದಲಾದ ಬೇಡಿಕೆ ಮುಂದಿಟ್ಟು ಎಸ್‌ಎಫ್‌ಐ ಹಾಗೂ ಎಕೆಜಿಸಿಯುಟಿ ಹಾಗೂ ಇತರ ಎಡಪಕ್ಷ ಬೆಂಬಲಿತ ಸಂಘಟನೆಗಳು ಜಂಟಿಯಾಗಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನಲ್ಲಿ ಶಿಕ್ಷಣ ಸಂರಕ್ಷಣೆ ಒಕ್ಕೂಟ ಆಯೋಜಿಸಲಾಯಿತು. ಎಕೆಜಿಸಿಟಿ ರಾಜ್ಯ ಸಮಿತಿ ಸದಸ್ಯ ಸಜಿತ್ ಪಾಲೇರಿ ಉದ್ಘಾಟಿಸಿದರು. ಎಸ್‌ಎಫ್‌ಐಯ ಕಾಲೇಜು ಘಟಕ ಕಾರ್ಯದರ್ಶಿ ಅಜಿತ್ ರಾಜ್ ಸ್ವಾಗತಿಸಿದರು. ಅಧ್ಯಕ್ಷ ಸುರಕ್ಷ ಅಧ್ಯಕ್ಷತೆ ವಹಿಸಿದರು. ಹಕೀಂ ಕಂಬಾರ್, ಅಜೀಜ್ ಮಾತನಾಡಿದರು.

RELATED NEWS

You cannot copy contents of this page