ಚೆಂಗಲ್ ಮಜ್ಲಿಸುನ್ನೂರ್ 10ನೇ ವಾರ್ಷಿಕ
ಉಪ್ಪಳ: ಬಂದ್ಯೋಡು ಬಳಿಯ ಚೆಂಗಲ್ ಸಿ.ಎಂ. ಎಜ್ಯುಕೇಶನಲ್ ಸೆಂಟರ್, ಅಲ್‌ನೂರ್ ಮಸೀದಿಯಲ್ಲಿ ಮಜ್ಲಿಸುನ್ನೂರ್‌ನ ೧೦ನೇ ವಾರ್ಷಿಕೋತ್ಸ ವದಂಗವಾಗಿ ಧ್ವಜಾರೋಹಣ ನಡೆಸಲಾಯಿತು. ಸೈಯ್ಯದ್ ಹಮ್ದುಲ್ಲಾ ತಂಙಳ್ ಅಲ್ ಮಶೂರ್ ಮೊಗ್ರಾಲ್ ಧ್ವಜಾರೋಹಣಗೈದರು. ಜಮಲುಲೈಲಿ ತಂಙಳ್ ಪ್ರಾರ್ಥನೆ ನಡೆಸಿದರು. ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಅಲಿ ಉಸ್ತಾದ್ ಅಧ್ಯಕ್ಷತೆ ವಹಿಸಿದರು. ಮುಹ್‌ಸಿನ್ ಉಸ್ತಾದ್, ಯೂಸುಫ್ ಉಸ್ತಾದ್, ಫೈಸಿ ಉಸ್ತಾದ್, ಉಲಮ, ಉಮರರು ಉಪಸ್ಥಿತರಿದ್ದರು. ಅಬ್ದುಲ್ ಜಬ್ಬಾರ್ ಹಾಜಿ ಸ್ವಾಗತಿಸಿ, ಮುಸ್ತಫ ಬದ್ರಿಯಾನಗರ ವಂದಿಸಿದರು.