ಚೆರ್ಕಳದ ಪ್ರೆಸ್‌ನಲ್ಲಿ ಖೋಟಾನೋಟು ಮುದ್ರಿಸಿದ ಮಾಲಕ ಸಹಿತ 4 ಮಂದಿ ಸೆರೆ: 2,13,500 ರೂ. ಮೌಲ್ಯದ 500 ರೂ. ಮುಖಬೆಲೆಯ ನೋಟು ವಶ

ಕಾಸರಗೋಡು: ಚೆರ್ಕಳದ ಪ್ರಿಂಟಿAಗ್ ಪ್ರೆಸ್ನಲ್ಲಿ ಮುದ್ರಿಸಿದ 2,13,500 ರೂ. ಮೌಲ್ಯದ 500 ರೂಪಾಯಿಯ ಖೋಟಾ ನೋಟುಗಳ ಸಹಿತ ನಾಲ್ಕು ಮಂದಿಯನ್ನು ಮಂಗಳೂರಿನಲ್ಲಿ ಸೆರೆ ಹಿಡಿಯಲಾಗಿದೆ. ಚೆರ್ಕಳದ ಶ್ರೀಲಿಪಿ ಪ್ರಿಂಟಿAಗ್ ಪ್ರೆಸ್ ಮಾಲಕ ಕರಿಚ್ಚೇರಿ ಪೆರಳ ನಿವಾಸಿ ವಿ. ಪ್ರಿಯೇಶ್ (38), ಮುಳಿಯಾರು ಮಲ್ಲ ಕಲ್ಲುಕಂಡದ ನಿವಾಸಿ ವಿನೋದ್ ಕುಮಾರ್ (33), ಪೆರಿಯ ಕುಣಿಯ ಶಿಫಾ ಮಂಜಿಲ್ನ ಅಬ್ದುಲ್ ಖಾದರ್ (58), ಕರ್ನಾಟಕ ಪುತ್ತೂರು ಬಲ್ನಾಡ್ ನಿವಾಸಿ ಅಯೂಬ್ ಖಾನ್ (51) ಎಂಬಿವರನ್ನು ಮಂಗಳೂರು ಸಿಟಿ ಕ್ರೈಂಬ್ರಾAಚ್ ಪೊಲೀಸರು ಬಂಧಿಸಿದ್ದಾರೆ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮಂಗಳೂರು ಕ್ಲಾಕ್ ಟವರ್ನ ಸಮೀಪದ ವಸತಿಗೃಹದಲ್ಲಿ ನಡೆಸಿದ ದಾಳಿಯಲ್ಲಿ ತಂಡವನ್ನು ಸೆರೆ ಹಿಡಿಯಲಾಗಿದೆ. ಕೊಠಡಿಯಿಂದ 500 ರೂ.ಗಳ 427 ಖೋಟಾನೋಟುಗಳನ್ನು ಹಾಗೂ 4 ಮೊಬೈಲ್ ಫೋನ್ಗಳನ್ನು ವಶಪಡಿಸಲಾಗಿದೆ. ಸಿಟಿ ಪೊಲೀಸ್ ಕಮಿಶನರ್ ಅನೂಪ್ ಅಗರ್ವಾಲ್ರ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ. ಈ ತಂಡದಲ್ಲಿ ಇನ್ನೂ ಹಲವರು ಕೊಂಡಿಗಳಾಗಿರಬೇಕೆAದು ಶಂಕಿಸಲಾಗಿದೆ. ಸೆರೆಯಾದ ಆರೋಪಿಗಳಿಗೆ ಇತರ ಯಾವುದಾ ದರೂ ಖೋಟಾನೋಟು ಪ್ರಕರಣಗಳಲ್ಲಿ ಸಂಬAಧವಿದೆಯೇ ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ.
ಆರ್ಥಿಕ ಸ್ಥಿತಿಯಲ್ಲಿ ಉಂಟಾದ ಸಂದಿಗ್ಧತೆಯಿAದಾಗಿ ಖೋಟಾನೋಟು ಮುದ್ರಿಸಲು ಆರಂಭಿಸಿದ್ದೆAದು ಪ್ರಿಯೇಶ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಯೂಟ್ಯೂಬ್ ನೋಡಿ ಖೋಟಾನೋಟು ಮುದ್ರಿಸುವ ಬಗ್ಗೆ ಕಲಿತಿರುವುದಾಗಿಯೂ, ಅದಕ್ಕೆ ಬೇಕಾದ ಕಚ್ಛಾ ಸಾಮಗ್ರಿಗಳನ್ನು ವಿವಿಧ ಕಡೆಗಳಿಂದ ತಲುಪಿಸಿರುವುದಾಗಿಯೂ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಇದೇ ವೇಳೆ ಒಂದು ಲಕ್ಷ ರೂ. ಮೌಲ್ಯದ ಖೋಟಾನೋಟುಗಳನ್ನು ನೀಡಿದ್ದು, ಪ್ರಿಯೇಶ್ಗೆ 25,000 ರೂ. ಲಭಿಸಿರುವುದಾಗಿ ಹೇಳಲಾಗುತ್ತಿದೆ. ಪ್ರಕರಣದ ಬಗ್ಗೆ ಪೊಲೀಸರು ಹಾಗೂ ಇಂಟೆಲಿಜೆನ್ಸ್ ತನಿಖೆ ಆರಂಭಿಸಿದೆ.

You cannot copy contents of this page