ನಕ್ಸಲ್ ಕಾರ್ಯಾಚರಣೆ: ವೇಳೆ ಐಇಡಿ ಸ್ಫೋಟ: ಇಬ್ಬರು ಯೋಧರು ಮೃತ್ಯು; ನಾಲ್ವರಿಗೆ ಗಾಯ

ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಸುಧಾರಿತ ಸ್ಫೋಟ ಸಾಧನ (ಐಇಡಿ) ಸ್ಫೋಟದಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ರಾಜ್ಯ ನಕ್ಸಲ್ ಕಾರ್ಯಪಡೆಯ ಮುಖ್ಯ ಕಾನ್‌ಸ್ಟೇಬಲ್ ಗಳಾದ ಭರತ್‌ಲಾಲ್ ಸಾಹು, ಸತಾರ್ ಸಿಂಗ್ ಎಂಬವರು ಕರ್ತವ್ಯದ ವೇಳೆ ಹುತಾತ್ಮ ರಾಗಿದ್ದಾರೆ. ತಾರೆಮ್ ಪೊಲೀಸ್ ಠಾಣೆಗೊ ಳಪಟ್ಟ ಪ್ರದೇಶದ ಮಂಡಿಮಾರ್ಕಾ ಅರಣ್ಯ ದಲ್ಲಿ ನಿನ್ನೆ ತಡರಾತ್ರಿ ಈ ಐಇಡಿ ಸ್ಫೋಟ ನಡೆಸಿದಿದೆ. ಭದ್ರತಾ ಪಡೆ ಸಿಬ್ಬಂದಿಗಳು ನಕ್ಸಲ್ ವಿರೋಧ ಕಾರ್ಯಾಚರಣೆಯಿಂದ  ಹಿಂತಿರುಗುತ್ತಿದ್ದಾಗ ಸ್ಫೋಟ ನಡೆಸಲಾಗಿದೆ.

You cannot copy contents of this page