ಮಂಜೇಶ್ವರ: ಎಲ್.ಡಿ.ಎಫ್ ಸರಕಾರ ಜ್ಯಾರಿಗೆ ತಂದ ಜನಪಯೋಗಿ ಯೋಜನೆಗಳ ಕುರಿತು ಜಾಗೃತಿ ಮೂಡಿಸ್ನು, ಸರಕಾರದಿಂದ ಉಂಟಾದ ಕುಂದುಕೊರತಗಳ ಬಗ್ಗೆ ನೇರವಾಗಿ ಸಂವಾದ ನಡೆಸ್ನು ಮುಖ್ಯಮಂತ್ರಿ ಹಾಗೂ ಸಚಿವರು ಕೇರಳದಾದ್ಯಂತ ವಿಧಾನ ಸಭಾ ಕ್ಷೇತ್ರ ಕೇಂದ್ರೀಕರಿಸಿ ನಡೆಸುವ ನವಕೇರಳೀಯ ಸದಸ್ಸ್ ಕಾರ್ಯಕ್ರಮ ನವಂಬರ್ 18 ರಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಆರಂಭಗೊಳ್ಳಲಿದೆ. ಇದನ್ನು ಯಶಸ್ವಿಗೊಳಿಸಲು ಮಂಡಲ ಮಟ್ಟದ ಸ್ವಾಗತ ಸಮಿತಿ ರೂಪೀಕರಣ ಸಭೆ ಅಕ್ಟೋಬರ್ 9 ರಂದು ಅಪರಾಹ್ನ 3 ಗಂಟೆಗೆ ಪೈವಳಿಕೆ ಕುಲಾಲ ಮಂದಿರದಲ್ಲಿ ಜರಗಲಿದೆ. ಅಕ್ಟೋಬರ್ 6 ರಿಂದ 8 ರವರೆಗೆ ಎಲ್.ಡಿ.ಎಫ್ ಪಂಚಾಯತ್ ಸಮಿತಿ ಸಭೆ ನಡೆಯಲಿದೆ. ಬೂತ್ ಮಟ್ಟದ ಸ್ವಾಗತ ಸಮಿತಿ ರಚನೆಯನ್ನು ಅಕ್ಟೋಬರ್ 20 ರೊಳಗೆ ಪೂರ್ತಿಗೊಳಿಸಲು ತೀರ್ಮಾನಿಸಲಾಗಿದೆ. 21 ರಿಂದ ನವಂಬರ್ 10 ರೊಳಗಾಗಿ ಅಂಗಳದ ಸಭೆ ಎಂಬ ರೀತಿಯ ಕುಟುಂಬ ಸಭೆಗಳು ನಡೆಯುವುದಾಗಿ ಮಂಡಲ ಸಮಿತಿ ಕನ್ವೀನರ್ ಬಿ.ವಿ ರಾಜನ್ ಹೇಳಿಕೆಯಲ್ಲಿ ತಿಳಿಸಿದರು. ಈ ಬಗ್ಗೆ ಇತ್ತೀಚೆಗೆ ಜರಗಿದ ಮಂಡಲ ಸಮಿತಿ ಸಭೆಯಲ್ಲಿ ಕೆ.ಆರ್ ಜಯಾನಂದ ಅಧ್ಯಕ್ಷತೆ ವಹಿಸಿದರು. ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಮಾಜಿ ಸಚಿವ ವಕ್ಕಂ ಪುರುಷೋತ್ತಮನ್, ಬಿಜೆಪಿ ನೇತಾರ ಪಿ.ಪಿ ಮುಕುಂದನ್, ಸುಪ್ರಸಿದ್ಧ ಕೃಷಿ ತಜ್ಞ ಎಂ.ಎಸ್ ಸ್ವಾಮಿನಾಥನ್, ದೇಶದ ಗಡಿಯಲ್ಲಿ ಭಯೋತ್ಪಾದಕ ಆಕ್ರಮಣದಿಂದಲೂ, ಟ್ರಕ್ ಅಪಘಾತದಿಂದ ಮಡಿದ ಧೀರ ಹುತಾತ್ಮ ಸೈನಿಕರಿಗೂ, ಮೊರಕ್ಕೋ ಭೂಕಂಪ, ಲಿಬಿಯ ಮಹಾ ಪ್ರಳಯ ಬದಿಯಡ್ಕ ಪಳ್ಳತಡ್ಕ ಶಾಲಾ ಬಸ್ ರಿಕ್ಷಾ ಅಪಘಾತದಲ್ಲಿ ಮರಣ ಹೊಂದಿದವರಿಗೂ, ಸಿಪಿಎಂ ಮುಂದಾಳು ಚಂದಪ್ಪ ಮಾಸ್ಟರ್, ಮಾಜಿ ಶಾಸಕ ಎಲ್.ಡಿ.ಎ±್ವ ಮುಂದಾಳು ಎಂ.ಕೆ ಪ್ರೇಮನಾಥ್, ಚಕ್ಕಿ ಕೇಶವ ಭಟ್ ಮೊದಲಾದವರ ನಿಧನಕ್ಕೆ ಸಭೆ ಸಂತಾಪ ವ್ಯಕ್ತಪಡಿಸಿತು. ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್ ಜಿಲ್ಲಾ ಸಮಿತಿ ತೀರ್ಮಾನಗಳನ್ನು ವಿವರಿಸಿದರು. ಸಭೆಯಲ್ಲಿ ಸಿಪಿಐಎಂ ಏರಿಯಾ ಕಾರ್ಯದರ್ಶಿ ಕೆ.ವಿ ಕುರ‍್ದಿ ರಾಮನ್, ಜಯ ರಾಮ ಬಲ್ಲಂಗುಡೇಲ್, ರಾಮಕೃಷ್ಣ ಕಡಂಬಾರ್, ಎಸ್. ರಾಮಚಂದ್ರ ಬಡಾಜೆ, ಪಿ. ರಘುದೇವನ್ ಮಾಸ್ಟರ್, ತಾಜುದ್ದೀನ್ ಮೊಗ್ರಾಲ್, ಹಮೀದ್ ಕಾಸ್ಮೋಸ್, ಅಹಮ್ಮದಾಲಿ ಕುಂಬಳೆ, ಡಾ| ಕೆ.ಎ ಖಾದರ್ ಭಾಗವಹಿಸಿದರು. ಮಂಡಲ ಸಂಚಾ ಲಕ ಬಿ.ವಿ ರಾಜನ್ ಸ್ವಾಗತಿಸಿ ವರದಿ ನೀಡಿದರು.
