ನಾರಂಪಾಡಿಯಿಂದ ನಾಪತ್ತೆಯಾದ ಯುವಕ ವಿಟ್ಲದಲ್ಲಿ  ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಒಂದು ತಿಂಗಳ ಹಿಂದೆ ನಾಪತ್ತೆಯಾದ ಯುವಕ ಕರ್ನಾಟಕದ ವಿಟ್ಲದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ನಾರಂಪಾಡಿ ನಿವಾಸಿ ರೋಶನ್ ಜೋನ್  ಡಿ’ಸೋಜಾ (42) ವಿಟ್ಲದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ  ಪತ್ತೆಯಾಗಿದ್ದರು. ಮೃತ ವ್ಯಕ್ತಿ ಯಾರೆಂದು ತಿಳಿಯದ ಹಿನ್ನೆಲೆಯಲ್ಲಿ ಮೃತದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿತ್ತು. ಅನಂತರ ಸಂಬಂಧಿಕರು ಅಲ್ಲಿಗೆ ತಲುಪಿ ಮೃತ ವ್ಯಕ್ತಿ ರೋಶನ್ ಜೋನ್ ಡಿ’ಸೋ ಜರೆಂದು ಗುರುತುಹಚ್ಚಿದ್ದಾರೆ.

ರೋಶನ್ ಜೋನ್ ಡಿ’ಸೋಜ ನಾಪತ್ತೆಯಾಗಿರುವುದಾಗಿ ತಿಳಿಸಿ ಮಂಜೇಶ್ವರದ ತೂಮಿನಾಡಿ ನಲ್ಲ್ಲಿರುವ ಸಹೋದರಿ ಸರಿತ ಡಿ’ಸೋಜ ಅಗೋಸ್ತ್ 25ರಂದು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೇಸು ದಾಖ ಲಿಸಿ ತನಿಖೆ ನಡೆಸುತ್ತಿರುವ ಮಧ್ಯೆ ಮೃತದೇಹ ವಿಟ್ಲದಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಇಂದು ಊರಿಗೆ ತಂದು ನಾರಂಪಾಡಿ ಇಗರ್ಜಿ ಪರಿಸರದಲ್ಲಿ ಅಂತ್ಯಸಂಸ್ಕಾರ ನಡೆಸುವುದಾಗಿ ಸಂಬಂಧಿಕರು ತಿಳಿಸಿದ್ದಾರೆ.

You cannot copy contents of this page