ಪತ್ನಿಗೆ ಇರಿತ: ಪತಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ಕೌಟುಂಬಿಕ ಸಮಸ್ಯೆ ಹೆಸರಲ್ಲಿ ಪತ್ನಿಗೆ ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯಾದ ಪತಿಯನ್ನು ಮೇಲ್ಪರಂಬ ಪೊಲೀಸ್ ಠಾಣೆಯ ಎಸ್ ಐ ವಿ.ಎನ್. ಸುರೇಶ್ ಕುಮಾರ್ ಬಂಧಿಸಿದ್ದಾರೆ. ಚಟ್ಟಂಚಾಲ್ ಬೆಂಡಿ ಚ್ಚಾಲ್ ನಿವಾಸಿ ಬಿ.ಎ. ಇಸ್ಮಾ ಯಿಲ್ (40) ಬಂಧಿತ ಆರೋಪಿ. ಈತನ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯನ್ನು ನಂತರ ನ್ಯಾಯಾಲ ಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಗುರುವಾರ ರಾತ್ರಿ ಆರೋಪಿ ಇಸ್ಮಾಯಿಲ್ ತನ್ನ ಪತ್ನಿ ಬೆಂಡಿಚ್ಚಾಲ್ ತೈವಳಪ್ಪಿನ ಶಂಶೀನಾ (30)ಳಿಗೆ ಇರಿದು ಗಾಯಗೊಳಿಸಿ ರುವುದಾಗಿ ಆರೋಪಿಸಲಾಗಿದೆ. ತಲೆ ಮತ್ತು  ಕೈಗೆ ಗಾಯಗೊಂಡ ಶಂಶೀನಾಳ ಬೊಬ್ಬೆ ಕೇಳಿದ ನೆರೆಮನೆಯವರು ತಕ್ಷಣ ಅಲ್ಲಿಗೆ ಆಗಮಿಸಿ ಆಕೆಯನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಗಾಯಾಳುವಿನ ಹೇಳಿ ಕೆಯನ್ನು ನಂತರ ದಾಖಲಿಸಿ ಕೊಂಡ ಪೊಲೀಸರು ಅದರ ಆಧಾರದಲ್ಲಿ ಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

You cannot copy contents of this page