ಕಾಸರಗೋಡು: ಚೆರ್ಕಳ ಸಮೀಪದ ಸಂತೋಷ್‌ನಗರದಲ್ಲಿ ನಿನ್ನೆ ಕಾಸರಗೋಡು-ಕಣ್ಣೂರು ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್‌ನ ಚಾಲಕ ಉಳಿಯತ್ತಡ್ಕದ ಬದ್ರುದ್ದೀನ್ (43)ರ ಮೇಲೆ ಹಲ್ಲೆ ನಡೆದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ಇದರಂತೆ ಮನ್ಸೂರ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೈಡ್ ಕೊಡುವ ವಿಷಯದಲ್ಲಿ ಮನ್ಸೂರ್ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಬಸ್ ಚಾಲಕ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
