ಭಕ್ತರ ಮೇಲೆ ಸರಕಾರ ಉದ್ದೇಶ ಪೂರ್ವಕ ಗದಾ ಪ್ರಹಾರ- ರವೀಶ ತಂತ್ರಿ ಕುಂಟಾರು

ಮಂಜೇಶ್ವರ: ಶಬರಿಮಲೆ ಆದಾಯವನ್ನು ಮಾತ್ರ ಕಣ್ಣಿಟ್ಟಿರುವ ಕೇರಳ ಸರಕಾರ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ. ಭಕ್ತರು ನರಕ ಯಾತನೆ ಅನುಭವಿಸುವಂತಾಗಿದೆ. ಇದರ ಶಾಪ ಎಡರಂಗ ಸರಕಾರಕ್ಕೆ ತಟ್ಟಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದರು. ಹೊಸಂಗಡಿ ಪ್ರೇರಣಾದಲ್ಲಿ ನಡೆದ ಬಿಜೆಪಿ ಮಂಜೇಶ್ವರ ಮಂಡಲ ನೇತಾರರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಆರ್ಥಿಕವಾಗಿ ಮುಗ್ಗಟ್ಟಿನಲ್ಲಿರುವ ಸರಕಾರ ಲೈಫ್ ಯೋಜನೆಯ ಹಣ ಬಿಡುಗಡೆ ಮಾಡದೆ ವಂಚಿಸುತ್ತಿದೆ. ಪಂಚಾಯತ್‌ಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮುಖಂಡರಾದ ಎ.ಕೆ. ಕಯ್ಯಾರ್, ಅಶ್ವಿನಿ ಎಂ.ಎಲ್, ಕೆ.ವಿ. ಭಟ್, ಭಾಸ್ಕರ ಪೊಯ್ಯೆ, ಯಾದವ ಬಡಾಜೆ, ಹರಿಶ್ಚಂದ್ರ ಎಂ, ಸುಬ್ರಹ್ಮಣ್ಯ ಭಟ್, ವಿನಯ ಭಾಸ್ಕರ್, ವಿಘ್ನೇಶ್ವರ ಭಟ್ ಮಾಸ್ಟರ್, ಲೋಕೇಶ್ ಜೋಡುಕಲ್ಲು, ಲಕ್ಷ್ಮಣ ಕುಂಜತ್ತೂರು ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ತುಳಸಿ ಕುಮಾರಿ ವಂದಿಸಿದರು.

RELATED NEWS

You cannot copy contents of this page