ರಸ್ತೆ ಅಡ್ಡ ದಾಟುತ್ತಿದ್ದ ಮಧ್ಯವಯಸ್ಕನಿಗೆ ಮಿನಿ ಟೆಂಪೋ ಢಿಕ್ಕಿ: ಮೃತ್ಯು

ಮಂಜೇಶ್ವರ: ರಸ್ತೆ ದಾಟುತ್ತಿದ್ದ ಮಧ್ಯವಯಸ್ಕ ಮಿನಿ ಟೆಂಪೋ ಢಿಕ್ಕಿ ಹೊಡೆದು ಮೃತಪಟ್ಟರು. ಉದ್ಯಾವರ ನಿವಾಸಿ ಅಬ್ದುಲ್ ಹಮೀದ್ (52) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ 8 ಗಂಟೆ ವೇಳೆ ಉದ್ಯಾವರ 10ನೇ ಮೈಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡ ದಾಟುತ್ತಿದ್ದಾಗ ಮಂಗಳೂರು ಭಾಗದಿಂದ ಆಗಮಿಸಿದ ಮಿನಿ ಟೆಂಪೋ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅಬ್ದುಲ್ ಹಮೀದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಗಾರ ದಲ್ಲಿರಿಸಲಾಗಿದೆ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ವಾಹನವನ್ನು ವಶಕ್ಕೆ ತೆಗೆದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವಿವಾಹಿತರಾದ ಮೃತರು ಸಹೋದರ, ಸಹೋ ದರಿಯರಾದ ಅಬ್ದುಲ್ ಖಾದರ್, ನಸೀರ, ಮರಿಯಮ್ಮ, ಖದೀಜ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ತಂದೆ ಮೊದೀನ್ ಕುಂಞಿ, ತಾಯಿ ಖದೀಜ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page