ರಾಷ್ಟ್ರಧ್ವಜಕ್ಕೆ ಅಗೌರವ ಯುವಕನ ವಿರುದ್ಧ ಕೇಸು

ಕಾಸರಗೋಡು: ಅಂಗಡಿಯಲ್ಲಿ ಮಾರಾಟಕ್ಕಿರಿಸಿದ್ದ ರಾಷ್ಟ್ರಧ್ವಜವನ್ನು ಕೆಳಗೆ ಹಾಕಿ ಅಗೌರವ ತೋರಿದ ಬಗ್ಗೆ ಆರೋಪವುಂಟಾಗಿದೆ. ಈ ಬಗ್ಗೆ ಪೊಯಿನಾಚಿಯ ಅಂಗಡಿ ಯೊಂದರ  ಮಾಲಕಿ ನೀಡಿದ ದೂರಿನಂತೆ ಪೊಯೀನಾಚಿ ಆಡ್ಯಂ ನಿವಾಸಿ  ಶ್ರೀಜಿತ್ (೩೫) ಎಂಬಾತನ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ.

ನಿನ್ನೆ ಅಂಗಡಿಗೆ ಬಂದ ಶ್ರೀಜಿತ್ ಅಲ್ಲಿ ಮಾರಾಟಕ್ಕಿರಿಸಿದ್ದ ರಾಷ್ಟ್ರಧ್ವಜವನ್ನು ನೆಲಕ್ಕೆ ಹಾಕಿದ್ದಾನೆನ್ನಲಾಗಿದೆ. ರಾಷ್ಟ್ರಧ್ವಜದ ಬಣ್ಣ ಹೆಚ್ಚಿದೆ ಎಂದು ಆರೋಪಿಸಿ ಈತ ಈ ಕೃತ್ಯ ನಡೆಸಿದ್ದಾನೆಂದು ದೂರಲಾಗಿದೆ.

You cannot copy contents of this page