ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವದ್ಧಿ ಹೆಸರಲ್ಲಿ ನಗರದ ಅಣಂಗೂರು ಜಂಕ್ಷನ್‌ನಲ್ಲಿದ್ದ ಬೃಹತ್ ಆಲದ ಮರವನ್ನು ಕಡಿದು ಹಾಕಿದ ಬಗ್ಗೆ ಕಾಸರಗೋಡು ನಗರ ಸಭಾ ಕಾರ್ಯದರ್ಶಿ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಮರದ ರೆಂಬೆಗಳನ್ನು ಮಾತ್ರವೇ ಮುರಿಯಲು ನಗರಸಭೆ ಅನುಮತಿ ನೀಡಿತ್ತು. ಅದರ ಬದಲು ಆ ಮರದ ಬುಡ ಸಹಿತ ಕಡಿದು ಹಾಕಲಾಗಿದೆ ಎಂದು ದೂರಿನಲ್ಲಿ ನಗರಸಭಾ ಕಾರ್ಯದರ್ಶಿ ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.