ಲೋಕಸಭಾ ಚುನಾವಣೆಗಿನ್ನು 9 ದಿನ ಬಾಕಿ : ಬಿರುಸಿನ ಪ್ರಚಾರಕ್ಕಿಳಿದ ರಾಜಕೀಯ ಪಕ್ಷಗಳು

ಕಾಸರಗೋಡು: ಲೋಕಸಬಾ ಚುನಾವಣೆಗೆ ಇನ್ನು ಕೇವಲ ಒಂಭತ್ತು ದಿನಗಳು ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ.

ಪ್ರತಿಸ್ಪರ್ಧಿಗಳನ್ನು ಪರಾಭವಗೊ ಳಿಸಲು ಪಕ್ಷಗಳು ಸಕಲ ರೀತಿಯ ತಂತ್ರಗಳನ್ನು ಪ್ರಯೋಗಿಸಿ ರಂಗಕ್ಕಿಳಿದಿವೆ. ಇದರಿಂದ ಇದುವರೆಗೆ ಕಾಣದಂತಹ ಹೋರಾಟಕ್ಕೆ ಈಬಾರಿ ವೇದಿಕೆ ಸಜ್ಜಾಗಿದೆ. ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು  ತೀವ್ರವಾಗಿ ಟೀಕಿಸಿದ್ದಾರೆ. ಇದೇ ವೇಳೆ ಈ ಬಾರಿ ಸೀಟು ಗಳಿಸಬಹುದೆಂಬ ಆಸೆ ಬಿಜೆಪಿಗೆ ಬೇಡವೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಇದರ ಜತೆಗೆ ಆರ್.ಎಸ್.ಎಸ್ ಹಾಗೂ ಮೋದಿ ವಿರುದ್ಧ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಇದು ಚುನಾವಣಾ ಪ್ರಚಾರರಂಗ ಇನ್ನಷ್ಟು ಬಿಸಿಯೇರಲು ಎಡೆಮಾಡಿಕೊಟ್ಟಿದೆ. ಇದೇ ವೇಳೆ ಇತ್ತೀಚೆಗೆ ಬಂದ ಸಮೀಕ್ಷೆಗಳು ಎಲ್ಲಾ ಒಕ್ಕೂಟಗಳಲ್ಲೂ ನಿರೀಕ್ಷೆ ಮೂಡಿಸಿದೆ.

RELATED NEWS

You cannot copy contents of this page