ಲೋಕಸಭೆ ಚುನಾವಣೆ:ಯಾರಿಗೆ ಗೆಲುವು, ಯಾರಿಗೆ ಸೋಲು ತಿಳಿಯಲು ಗಂಟೆಗಳು ಬಾಕಿ

ಕಾಸರಗೋಡು: ಲೋಕಸಭಾ ಚುನಾ ವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭಗೊAಡಿದೆ. ಕಳೆದ ಒಂದು ತಿಂಗಳಿ ಗಿಂತ ಹೆಚ್ಚು ಕಾಲದಿಂದ ದೇಶದ ಜನತೆ ಅತೀ ಕುತೂಹಲದಿಂದ ಕಾಯುತ್ತಿರುವ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದೆ.
ಇದೇ ವೇಳೆ ಎಲ್ಲಾ ರಾಜಕೀಯ ಪಕ್ಷಗಳು, ಒಕ್ಕೂಟಗಳು, ಅಭ್ಯರ್ಥಿಗಳು ಹಾಗೂ ನೇತಾರರು ಗೆಲುವಿನ ಪೂರ್ಣ ನಿರೀಕ್ಷೆಯನ್ನು ವ್ಯಕ್ತಪಡಿಸಿ ಹೇಳಿಕೆ ನೀಡುತ್ತಿದ್ದರೂ ಅವರಿಗೆಲ್ಲಾ ಒಳಗೊಳಗೆ ಆತಂಕ ಇದ್ದೇ ಇದೆ. ಈ ಬಾರಿಯ ಚುನಾವಣೆಯ ಫಲಿತಾಂಶ ಎಲ್ಲಾ ಪಕ್ಷ ಗಳಿಗೂ ಅತೀ ನಿರ್ಣಾಯಕವಾಗಿದೆ. ಆದ್ದರಿಂದ ಎಲ್ಲಾ ರಾಜಕೀಯ ಪಕ್ಷ ಗಳೂ ಕಳೆದೊಂದು ತಿಂಗಳಿAದ ಲೆಕ್ಕಾಚಾರಗಳಲ್ಲೇ ತೊಡಗಿಕೊಂಡಿವೆ.
ರಾಜ್ಯದ 20 ಲೋಕಸಭಾ ಕ್ಷೇತ್ರ ಗಳಲ್ಲಿ ಎಲ್ಡಿಎಫ್, ಯುಡಿಎಫ್, ಎನ್ಡಿಎ ಮಧ್ಯೆ ತ್ರಿಕೋನ ಸ್ಪರ್ಧೆ ನಡೆದಿರುತ್ತದೆ. ಇದೇ ವೇಳೆ ಈ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ನಮ್ಮದೇ ಎಂದು ಎಲ್ಡಿಎಫ್ ಹಾಗೂ ಯುಡಿಎಫ್ ಅಭಿಪ್ರಾಯವ್ಯಕ್ತಪಡಿಸುತ್ತಿವೆ. ಆದರೆ ಈ ಬಾರಿ ಖಾತೆ ತೆರೆಯಲಿದ್ದು, ಮೂರಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಳ್ಳುವುದಾಗಿ ಎನ್ಡಿಎ ಕೂಡಾ ಹೇಳುತ್ತಿದೆ. ಈ ಬಾರಿ ಅತೀ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕೆಂಬ ಗುರಿಯೊಂದಿಗೆ ಎಲ್ಲಾ ಒಕ್ಕೂಟಗಳು ಅಬ್ಬರದ ಪ್ರಚಾರವನ್ನೇ ನಡೆಸಿವೆ. ಕೇಂದ್ರ ನೇತಾರರು ಕೂಡಾ ರಾಜ್ಯದಲ್ಲಿ ಪ್ರಚಾರ ರ್ಯಾ ಲಿಗಳಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೂರನೇ ಬಾರಿಗೆ ಅಧಿಕಾರಕ್ಕೇರಿ ಪ್ರಧಾನಮಂತ್ರಿಯಾಗಿ ನರೇಂದ್ರಮೋದಿ ಹ್ಯಾಟ್ರಿಕ್ ಸಾಧನೆಗೈ ಯ್ಯುವರೇ ಎಂದು ನಾಳೆ ತಿಳಿಯಲಿದೆ.
ಎನ್ಡಿಎ ಈ ಬಾರಿ ಪರಾಭ ವಗೊಳ್ಳಲಿದೆಯೆಂದೂ, ಐಎನ್ಡಿಐಎ ಗೆ ಈ ಬಾರಿ ಗೆಲುವು ಖಚಿತ ಎಂದು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಅಭಿಪ್ರಾಯಪಡುತ್ತಿವೆ. ಇದರಲ್ಲಿ ಯಾರ ಅಭಿಪ್ರಾಯ ಸರಿಯಾಗಲಿದೆ ಎಂದು ತಿಳಿಯಲು ಇನ್ನು ಕೆಲವೇ ಗಂಟೆಗಳು ಕಾಯಬೇಕು.
2019ರ ಲೋಕಸಭಾ ಚುನಾ ವಣೆಯಲ್ಲಿ ಕೇರಳದಲ್ಲಿ ಯುಡಿಎಫ್ ನದ್ದೇ ಅಲೆ ಕಂಡುಬAದಿತ್ತು. ಒಟ್ಟು 20 ಲೋಕಸಭಾ ಕ್ಷೇತ್ರಗಳ ಪೈಕಿ 19ರಲ್ಲೂ ಯುಡಿಎಫ್ ಜಯಭೇರಿ ಬಾರಿಸಿದೆ. ಕೇವಲ ಒಂದು ಸೀಟಿನಲ್ಲಿ ಎಲ್ಡಿಫ್ಗೆ ಗೆಲುವು ಲಭಿಸಿದೆ. ಆಲಪ್ಪುಳದಲ್ಲಿ ಎಲ್ಡಿಎಫ್ ಅಭ್ಯರ್ಥಿ ಎ.ಎಂ. ಆರೀಫ್ ಅವರು ಮಾತ್ರವೇ ಗೆಲುವುಸಾಧಿಸಿದ್ದಾರೆ. ಉಳಿದ 19 ಕೂಡಾ ಯುಡಿಎಫ್ನ ಪಾಲಾಗಿತ್ತು.
ಕಾಸರಗೋಡು ಜಿಲ್ಲೆಯ ಐದು ಹಾಗೂ ಕಣ್ಣೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳು ಒಳಗೊಂಡ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 2019ರಲ್ಲಿ ಯುಡಿಎಫ್ನಿಂದ ರಾಜ್ ಮೋಹನ್ ಉಣ್ಣಿತ್ತಾನ್, ಎಲ್ಡಿಎಫ್ ನಿಂದ ಕೆ.ಪಿ. ಸತೀಶ್ಚಂದ್ರನ್, ಎನ್ಡಿಎಯಿಂದ ರವೀಶ ತಂತ್ರಿ ಕುಂಟಾರು ಅವರೊಳಗೆ ತೀವ್ರ ಪೈಪೋಟಿ ನಡೆದಿತ್ತು. ಈ ಪೈಕಿ ರಾಜ್ಮೋಹನ್ ಉಣ್ಣಿತ್ತಾನ್ 40,438 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಉಣ್ಣಿತ್ತಾನ್ರಿಗೆ 4,79,961 ಮತಗಳು ಲಭಿಸಿದಾಗ, ಕೆ.ಪಿ. ಸತೀಶ್ಚಂದ್ರನ್ರಿಗೆ 4,34,523, ರವೀಶ ತಂತ್ರಿಯವರಿಗೆ 1,76,049 ಮತಗಳು ಲಭಿಸಿತ್ತು. ರಾಜ್ಮೋಹನ್ ಉಣ್ಣಿ ತ್ತಾನ್ ಗೆಲುವು ಸಾಧಿಸುವ ಮೂಲಕ ಈ ಲೋಕಸಭಾ ಕ್ಷೇತ್ರದ 30 ವರ್ಷಗಳ ರಾಜಕೀಯ ಇತಿಹಾಸವನ್ನೇ ತಿದ್ದಿದ್ದಾರೆ. 1984ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಐ. ರಾಮ ರೈ ಯವರು ಗೆದ್ದಿದ್ದರು. ಅವರು ಸಿಪಿಎಂನ ಎಂ. ರಾಮಣ್ಣ ರೈ ಯವರನ್ನು 11,369 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದರು. ಅನಂತರದ 30 ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಎಲ್ಡಿಎಫ್ ಗೆಲುವು ಸಾಧಿಸಿತ್ತು. ಆದರೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಯುಡಿಎಫ್ನದ್ದಾಗಿತ್ತು. ಹೀಗೆ ಎಲ್ಡಿಎಫ್ನ ಭದ್ರ ಕೋಟೆಯಲ್ಲಿ 2019ರಲ್ಲಿ ಗೆಲುವು ಸಾಧಿಸಿದ ರಾಜ್ಮೋಹನ್ ಉಣ್ಣಿತ್ತಾನ್ರನ್ನೇ 2024ರಲ್ಲೂ ಯುಡಿಎಫ್ ಕಣಕ್ಕಿಳಿಸಿದೆ.
ಇದೇ ವೇಳೆ ಈ ಬಾರಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್ ಮಾಸ್ತರ್ ಎಲ್ಡಿಎಫ್ ಅಭ್ಯರ್ಥಿಯಾಗಿಯೂ, ಬಿಜೆಪಿಯ ಎಂ.ಎಲ್.ಅಶ್ವಿನಿ ಎನ್ಡಿಎ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದಾರೆ. ಈ ಮೂವರ ಪೈಕಿ ಯಾರು ಗೆಲುವು ಸಾಧಿಸುತ್ತಾರೆ ಎಂದು ತಿಳಿಯಲು ಇನ್ನು ಕ್ಷಣಗಳು ಮಾತ್ರವೇ ಬಾಕಿಯಿದೆ.
ಇದೇ ವೇಳೆ ಕೇಂದ್ರದಲ್ಲಿ ಯಾರುಆಡಳಿತ ನಡೆಸುವರೆಂಬ ಬಗ್ಗೆಯೂ ನಾಳೆ ಸ್ಪಷ್ಟಗೊಳ್ಳಲಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ 353 ಸೀಟು ಗಳು ಲಭಿಸಿತ್ತು. ಈ ಪೈಕಿ ಬಿಜೆಪಿಗೆ ಮಾತ್ರ 303 ಸೀಟುಗಳು ಲಭಿಸಿದೆ. ಆ ಮೂಲಕ ನರೇಂದ್ರಮೋದಿಯವರು ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಕಾಂಗ್ರೆಸ್ ನೇತೃತ್ವದ ಯುಪಿಎಗೆ 93, ಎಡಪಕ್ಷಗಳಿಗೆ 5 ಸೀಟುಗಳು ಲಭಿಸಿತ್ತು.
ಈ ಬಾರಿಯೂ ಎನ್ಡಿಎ ಅಧಿಕಾರಕ್ಕೇರಿ ಹ್ಯಾಟ್ರಿಕ್ ಸಾಧನೆಗೈಯ್ಯಲಿದೆಯೆಂದು ಬಿಜೆಪಿ ಹಾಗೂ ಮಿತ್ರಪಕ್ಷಗಳು ಅಭಿಪ್ರಾಯಪಟ್ಟಿವೆ. ಇದೇ ವೇಳೆ ಎನ್ಡಿಎ ಮೂರನೇ ಬಾರಿ ಅಧಿಕಾರಕ್ಕೇರುವುದನ್ನು ತಡೆಯಲು ಕಾಂಗ್ರೆಸ್ ಸಹಿತ ವಿರೋಧಪಕ್ಷಗಳು ಭಾರೀ ಪ್ರಯತ್ನವನ್ನು ನಡೆಸಿವೆ.

ಎನ್‌ಡಿಎಯನ್ನು ವಿರೋಧಿಸುವ ಕೆಲವು ಪಕ್ಷಗಳನ್ನು ಸೇರಿಸಿಕೊಂಡು ಈ ಬಾರಿ ಯುಪಿಎ ಬದಲಾಗಿ ಐಎನ್‌ಡಿಐಎ(ಇಂಡಿಯ) ಎಂಬ ರಾಜಕೀಯ ಒಕ್ಕೂಟ  ರಚಿಸಿ ಸ್ಪರ್ಧಿಸಿವೆ.

ಇದೇ ವೇಳೆ ಕಾಂಗ್ರೆಸ್ ನೇತೃತ್ವ ನೀಡುವ ಇಂಡಿಯಾ ಒಕ್ಕೂಟದಲ್ಲಿ   ಸಿಪಿಎಂ ಹಾಗೂ ಸಿಪಿಐ ಕೂಡಾ ಒಳಗೊಂಡಿದ್ದು ಅದು   ಕೇರಳದಲ್ಲಿ ಭಾರೀ ಚರ್ಚೆಯಾಗಿತ್ತು. ಆದರೆ ಕೇರಳದಲ್ಲಿ ಸಿಪಿಎಂ, ಸಿಪಿಐ ಒಳಗೊಂಡ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮಧ್ಯೆ ಪೈಪೋಟಿ ನಡೆದಿದೆ.

Leave a Reply

Your email address will not be published. Required fields are marked *

You cannot copy content of this page