ವ್ಯಾಪಕಗೊಂಡ ಬೈಕ್ ಕಳವು

ಉಪ್ಪಳ: ಮಂಜೇಶ್ವರ ಪೊಲೀ ಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳವು ಪ್ರಕರಣ ತೀವ್ರಗೊಂಡಿದೆ. ವರ್ಕಾಡಿ ಪುಚ್ಚೆತ್ತಬೈಲಿನ ಅಬ್ದುಲ್ ಹಸೈನಾರ್ ಎಂಬಿವರ ಬುಲ್ಲೆಟ್ ಬೈಕ್ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಮೊನ್ನೆ ರಾತ್ರಿ ಬೈಕ್‌ನಲ್ಲಿ ಮನೆ ಬಳಿ ನಿಲ್ಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ  ನೋ ಡಿದಾಗ ಅದು ನಾಪತ್ತೆಯಾಗಿದೆ ಯೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಂಜೇಶ್ವರದ ಚೌಕಿ ಎಂಬಲ್ಲಿಂದಲೂ ಇತ್ತೀಚೆಗೆ ಒಂದು ಬೈಕ್ ಕಳವಿಗೀಡಾಗಿತ್ತು. ಚೌಕಿಯ ಹನೀಫ್ ಎಂಬಿವರ ಬೈಕ್ ಕಳವಿಗೀ ಡಾಗಿದ್ದು ಅದಿನ್ನೂ ಪತ್ತೆಯಾಗಿಲ್ಲ. ಈ ಬಗ್ಗೆಯೂ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮನೆ ಬಳಿ ನಿಲ್ಲಿಸಿದ್ದ ಬೈಕ್‌ಗಳು ವ್ಯಾಪಕವಾಗಿ ಕಳವಿಗೀಡಾಗು ತ್ತಿರುವುದು ಜನರಲ್ಲಿ ಆತಂಕ ತೀವ್ರಗೊಂಡಿದೆ.

You cannot copy contents of this page