ನಂಬ್ರಪ್ಲೇಟ್ ಇಲ್ಲದ ವಾಹನಗಳ ವಿರುದ್ಧ ಕ್ರಮ: ಕುಂಬಳೆಯಲ್ಲಿ ಬೈಕ್ ವಶ

ಕುಂಬಳೆ: ನಂಬ್ರಪ್ಲೇಟ್ ಇಲ್ಲದ ಬೈಕ್‌ಗಳಲ್ಲಿ ರಾತ್ರಿ ವೇಳೆ ಯುವಕರು ಸುತ್ತಾಡುವುದು ಹೆಚ್ಚಿದ ಹಿನ್ನೆಲೆಯಲ್ಲಿ ಅದರ ವಿರುದ್ಧ ಕುಂಬಳೆ ಪೊಲೀಸರು  ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಇದರಂತೆ ನಿನ್ನೆ ರಾತ್ರಿ 12 ಗಂಟೆಗೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಂಬ್ರ ಪ್ಲೇಟ್ ಇಲ್ಲದ ಬೈಕೊಂದನ್ನು ಕುಂಬಳೆ ಶಾಲೆ ರಸ್ತೆಯಿಂದ ವಶಪಡಿಸಲಾಗಿದೆ. ಅದರ ಸವಾರನಿಂದ ಮಾಹಿತಿ ಸಂಗ್ರಹಿಸಿ ಆತನನ್ನು ಬಿಡುಗಡೆಗೊಳಿಸಲಾಗಿದೆ.  ವಿವಿಧ ರೀತಿಯ ಮಾದಕವಸ್ತು ಸಹಿತ ಅನಧಿಕೃತ ಚಟುವಟಿಕೆಗಳಿಗೆ ಹೆಚ್ಚಾಗಿ ನಂಬ್ರಪ್ಲೇಟ್ ಇಲ್ಲದ ವಾಹನಗಳನ್ನು  ಬಳಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅದರ ವಿರುದ್ಧ ಕಾ ರ್ಯಾಚರಣೆ  ತೀವ್ರಗೊಳಿಸಲಾಗು ವುದೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page