ವ್ಯಾಪಾರಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಪೊಯಿನಾಚಿಗೆ ಸಮೀಪದ ಬಟ್ಟತ್ತೂರುನಲ್ಲಿ ಕೋಳಿ ಮಾರಾಟದಂಗಡಿ ನಡೆಸುತ್ತಿರುವ ವ್ಯಾಪಾರಿ ಮೈಕಾನದ ನಿವಾಸಿ ಕೆ. ಸದಾನಂದ (೪೫) ಎಂಬವರು ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇವರು ತೀವ್ರ ವ್ಯಾಪಾರ ನಷ್ಟ ಅನುಭವಿಸುತ್ತಿದ್ದರೆಂದು ಅವರ ಸ್ನೇಹಿತರು ಹೇಳುತ್ತಿದ್ದರು. ಸದಾನಂದರು ವ್ಯಾಪಾರಿ ವ್ಯವಸಾಯಿ ಸಮಿತಿಯ ಪನೆಯಾಲ್ ಘಟಕದ ಸದಸ್ಯರೂ ಆಗಿದ್ದರು. ಜನಾರ್ದನನ್ -ಕೃಷ್ಣಮ್ಮ ದಂಪತಿ ಪುತ್ರನಾಗಿರುವ ಮೃತರು ಪತ್ನಿ ಶಕುಂತಳ, ಸಹೋದರ ಸಹೋದರಿಯರಾದ ಬಾಲಕಷ್ಣನ್, ಚಂದ್ರಶೇಖರ, ಪುರುಷೋತ್ತಮ, ನಾರಾಯಣ, ಲೀಲಾವತಿ ಪ್ರೇಮಲತ, ಶಾರದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಬೇಕಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You cannot copy contents of this page