ಸರಿಯಾದ ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ ೧೯.೬೦ ಲಕ್ಷ ರೂ. ವಶ: ಯುವಕನ ವಿರುದ್ಧ ಕೇಸು

ಕಾಸರಗೋಡು: ಸರಿಯಾದ ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಕಾಳಧನವೆಂದು ಶಂಕಿಸಲಾಗುತ್ತಿರುವ ೧೯,೬೦,೫೦೦ ರೂಪಾಯಿಯನ್ನು ಕಾಸರಗೋಡು ಪೊಲೀಸರು ಪತ್ತೆಹಚ್ಚಿ ವಶಪಡಿಸಿದ್ದಾರೆ.

ಇದಕ್ಕೆ ಸಂಬಂಧಿಸಿ ಕುಂಬಳೆ ಬಂಬ್ರಾಣ ಕಿದೂರು ಶಹಬಾದ್ ಮಂಜಿಲ್‌ನ ಕೆ.ಎಚ್. ಅಬೂಬಕರ್ ಸಿದ್ದಿಕ್ (೪೬) ಎಂಬಾತನನ್ನು ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ವಿಷ್ಣುಪ್ರಸಾದ್ ನೇತೃತ್ವದ ಪೊಲೀಸರು ಸೆರೆಹಿಡಿದಿದ್ದಾರೆ. ವಶಪಡಿಸಲಾದ ಮಾಲಿನಲ್ಲಿ ೫೦೦ ರೂ. ಮುಖಬೆಲೆಯ ತಲಾ ೧೦೦ರ ೩೯ ನೋಟುಗಳ ಕಂತು ಮತ್ತು ೫೦೦ ರೂ. ಮುಖಬೆಲೆಯ ೨೧ ನೋಟುಗಳನ್ನೊಳ ಗೊಂಡ ಕಂತೆಗಳು ಒಳಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ. ವಿವಿಧ ಪ್ರದೇಶಗಳಿಗೆ ಪೂರೈಸಲೆಂದು ತರಲಾಗಿದ್ದ ಹಣ ಇದಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡು ಡಿವೈಎಸ್ಪಿ ಪಿ.ಕೆ. ಸುಧಾಕರನ್‌ರಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಎಸ್‌ಐ ವಿಷ್ಣುಪ್ರಸಾದ್ ನೇತೃತ್ವದ ಪೊಲೀಸರ ತಂಡ ನಿನ್ನೆ ನಗರದ ಕರಂದಕ್ಕಾಡಿನಲ್ಲಿ ಕಾರ್ಯಾಚರಣೆಗಿಳಿದಾಗ ಹಣದೊಂದಿಗೆ ಕಾಸರಗೋಡಿನತ್ತ ಬರುತ್ತಿದ್ದ ಸ್ವಿಫ್ಟ್ ಕಾರು ಪೊಲೀಸರ ಕಣ್ತಪ್ಪಿಸಿ ಅಲ್ಲಿಂದ ಮುಂದಕ್ಕೆ ಸಾಗಿದೆ. ಅದನ್ನು ಕಂಡ ಪೊಲೀಸರು ತಮ್ಮ ವಾಹನದಲ್ಲಿ ಅದನ್ನು ಹಿಂಬಾಲಿಸಿ ಹೋಗಿ ನಗರದ ಆಕ್ಸಿಸ್ ಬ್ಯಾಂಕ್ ರಸ್ತೆ ಬಳಿ  ಕಾರಿಗೆ ತಮ್ಮ ಜೀಪನ್ನು ಅಡ್ಡ ನಿಲ್ಲಿಸಿ  ಆ ಕಾರು ಮತ್ತು ಅದರಲ್ಲಿದ್ದ ಹಣ ಹಾಗೂ ಅದನ್ನು ಚಲಾಯಿಸುತ್ತಿದ್ದ ಅಬೂಬಕರ್ ಸಿದ್ದಿಕ್‌ನನ್ನು  ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿಕೊಂಡರು. ನಂತರ ಅಬೂಬಕರ್ ಸಿದ್ದಿಕ್‌ನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. 

Leave a Reply

Your email address will not be published. Required fields are marked *

You cannot copy content of this page