ಹೆಚ್ಚುತ್ತಿರುವ ಭಕ್ತರ ಸಂದಣಿ: ತಿರುಪತಿ ಮಾದರಿಯಲ್ಲಿ ನಿಯಂತ್ರಣ

ಶಬರಿಮಲೆ: ಕ್ಷೇತ್ರದರ್ಶನ ನಡೆಸುವ ತೀರ್ಥಾಟಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು,  ಸಂದಣಿಯನ್ನು ನಿಯಂತ್ರಿಸಲು ತಿರುಪತಿ ಮಾದರಿಯಲ್ಲಿ ಕ್ಯೂ ವ್ಯವಸ್ಥೆ ಏರ್ಪಡಿಸಲಾಗಿದೆ. ನಿನ್ನೆ ಮುಂಜಾನೆ ಯಿಂದಲೇ ಕ್ಯೂ ಕಾಂಪ್ಲೆಕ್ಸ್‌ಗಳಲ್ಲಿ ತೀರ್ಥಾಟಕರನ್ನು ನಿಲ್ಲಿಸಿದ ಬಳಿಕ ಸನ್ನಿಧಾನದಿಂದ ಲಭಿಸಿದ ಪೊಲೀಸರ ನಿರ್ದೇಶ ಪ್ರಕಾರ  ಪ್ರತೀ ಕಾಂಪ್ಲೆಕ್ಸ್ ಗಳನ್ನು ತೆರೆದು ಬಿಡಲಾಯಿತು.

ಶನಿವಾರ, ಆದಿತ್ಯವಾರ ದಿನ ಗಳಲ್ಲಿ ತೀರ್ಥಾಟಕರು ಪಂಪಾ ದಿಂದ ಸನ್ನಿಧಾನಕ್ಕೆ ತಲುಪಲು ೭ರಿಂದ ೮ ಗಂಟೆವರೆಗೆ ತಗಲುತ್ತದೆ. ನಿನ್ನೆ ತೀರ್ಥಾಟಕರ ಸಂಖ್ಯೆಯಲ್ಲಿ ಹೆಚ್ಚಳವಿದ್ದರೂ ೪ರಿಂದ ೫ ಗಂಟೆ ಯೊಳಗೆ ತಲುಪಲು ಸಾಧ್ಯವಾಗಿದೆ.

ಸನ್ನಿಧಾನದಲ್ಲಿ ಭಕ್ತರ ಸಂದಣಿ ಹೆಚ್ಚುವುದಕ್ಕೆ ಅನುಸರಿಸಿ ಮುಂದಿನ ದಿನಗಳಲ್ಲಿ ಆರು ಕ್ಯೂ ಕಾಂಪ್ಲೆಕ್ಸ್‌ಗಳನ್ನು ಉಪಯೋಗಿಸಲಾ ಗುವುದೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page