ಗೃಹಿಣಿ ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ಗೃಹಿಣಿಯೋರ್ವೆ ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತೃಕ್ಕರಿಪುರ ವಡಕ್ಕೇಕೊವ್ವಲ್ ಎಂಬಲ್ಲಿ ನಡೆದಿದೆ.  ಮಾಜಿ ಡಿಸಿಸಿ ಅಧ್ಯಕ್ಷ ಕೆ.ವೆಳ್ತಂಬುರ ಪುತ್ರ ವಲ್ಸರಾಜ್‌ರ ಪತ್ನಿ ಬಿಂದು (52) ಮೃತಪಟ್ಟ ಮಹಿಳೆ. ಇಂದು ಬೆಳಿಗ್ಗೆ ಇವರ ತರವಾಡು ಮನೆಯ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಅಗ್ನಿಶಾಮಕದಳ ಹಾಗೂ ಚಂದೇರ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಮೇಲಕ್ಕೆತ್ತಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಕಾಞಂಗಾಡ್ ಕಲ್ಯಾಣ್‌ರೋಡ್ ನಿವಾಸಿಯಾದ ನಿವೃತ್ತ ತಹಶೀಲ್ದಾರ್ ಕೆ.ವಿ.ರಾಘವನ್ ಹಾಗೂ ಸರೋಜಿನಿ ದಂಪತಿಯ ಪುತ್ರಿಯಾದ ಬಿಂದು ಪುತ್ರ ಅರ್ಜುನ್,ಸೊಸೆ ಅನುಶ್ರೀ, ಸಹೋ ದರ-ಸಹೋದರಿಯರಾದ ಪ್ರಕಾಶ ನ್, ನ್ಯಾಯವಾದಿ ಸಂತೋಷ್, ಬೀನ, ಅನಂತವಲ್ಲಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page