ಅಂಗೀಕೃತ ಪಾಸ್ ಬಳಸಿ ಅನಧಿಕೃತವಾಗಿ ಹೊಯ್ಗೆ ಸಾಗಾಟ: ಲಾರಿ ವಶ; ಇಬ್ಬರ ವಿರುದ್ಧ ಕೇಸು

ಕುಂಬಳೆ: ಅಂಗೀಕೃತ ಕಡವಿನ ಪಾಸ್ ಬಳಸಿ ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಕುಂಬಳ ಎಸ್‌ಐ ಉಮೇಶ್ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಲಾರಿಯ ಮಾಲಕ ವಳ ಯಂ ಕೆ.ಕೆ.ಹೌಸ್‌ನ ಅಲಿಕುಂಞಿ (೩೬), ಚಾಲಕ ಕರ್ನಾಟಕ ನಿವಾಸಿಯೂ ಬಾಯಾರಿನಲ್ಲಿ ವಾಸಿಸುವ ಅಬ್ದುಲ್ ಮುನೀರ್ (೨೩) ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ವಳಯಂ ಕಡವಿನಿಂದ ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ವೇಳೆ ಲಾರಿಯನ್ನು ವಶಪಡಿಸಲಾಗಿದೆ. ನಿನ್ನೆ ಬೆಳಿಗ್ಗೆ ಅಂಗೀಕೃತ ಕಡವಿನ ಪಾಸ್ ಮೂಲಕ ಈ ಲಾರಿಯಲ್ಲಿ ಹೊಯ್ಗೆ  ಸಾಗಿಸಲಾಗಿದೆ. ಅನಂತರವೂ ಇದೇ ಪಾಸ್ ಬಳಸಿ ಅನಧಿಕೃತವಾಗಿ ಹೊಯ್ಗೆ ಸಾಗಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page