1ನೇ ನಂಬ್ರ ಮಂಡಲ, 1ನೇ ನಂಬ್ರ ಮತಗಟ್ಟೆ, ಅಶ್ವಿನಿಯಿಂದ 1ನೇ ನಂಬ್ರ ಮತ ಚಲಾವಣೆ

ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆ ಇತಿಹಾಸದಲ್ಲಿ ವಿಶೇಷವಾದ ಒಂದನೇ ನಂಬ್ರ ಸಾಧನೆ ಸ್ವಂತ ಮಾಡಿರುವುದು ಅಶ್ವಿನಿ ಎಂಬ ಮತದಾರೆಯಾಗಿದ್ದಾರೆ. ರಾಜ್ಯದ ಒಂದನೇ ನಂಬ್ರ ವಿಧಾನಸಭಾ ಮಂಡಲವಾದ ಮಂಜೇಶ್ವರದ ಒಂದನೇ ನಂಬ್ರ ಮತಗಟ್ಟೆಯಲ್ಲಿ ಒಂದನೆಯವಳಾಗಿ ಮತದಾನಗೈದಿರುವುದು ಅಶ್ವಿನಿಯಾಗಿದ್ದಾರೆ. ಜಿವಿಎಚ್‌ಎಸ್‌ಎಸ್ ಕುಂಜತ್ತೂರಿನ ೧ನೇ ನಂಬ್ರ ಬೂತ್‌ನಲ್ಲಿ ಅಶ್ವಿನಿ ಮತದಾನ ಮಾಡಿದ್ದಾರೆ. ಮಂಜೇಶ್ವರ ಗೇರುಕಟ್ಟೆಯ ಅಂಗನವಾಡಿಯಲ್ಲಿ ಈಕೆ ಅಧ್ಯಾಪಿಕೆಯಾಗಿದ್ದಾರೆ. ಈ ಬಾರಿ ಉದ್ಯಾವರ ಜಿಎಲ್‌ಪಿ ಶಾಲೆ ಬೂತ್ ಲೆವೆಲ್ ಆಫೀಸರ್ ಆಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಅನುಮತಿ ಪಡೆದು ಅಶ್ವಿನಿ ಬೆಳ್ಳಂಬೆಳಗ್ಗೆಯೇ ಬೂತ್‌ಗೆ ತಲುಪಿ ಮತದಾನ ಗೈದಿದ್ದಾರೆ.

ತಾಯಿ 1ನೇ ನಂಬ್ರ ಬೂತ್‌ನ ಮೊದಲ ಮತ ಚಲಾಯಿಸಿದಾಗ ಪುತ್ರ ಕಾರ್ತಿಕ್ ಈ ಬಾರಿ ಮೊದಲ ಮತ ಚಲಾಯಿಸಿದ ಉತ್ಸಾಹ ಹೊಂದಿದ್ದಾನೆ. ಬೆಂಜನ ಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾದ ಕಾರ್ತಿಕ್ ಇದೇ ಮೊದಲ ಬಾರಿ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಹಭಾಗಿಯಾಗಿದ್ದಾನೆ. 1087 ಮತದಾರರಿರುವ ಕುಂಜತ್ತೂರು ಜಿವಿಎಚ್‌ಎಸ್‌ಎಸ್‌ನಲ್ಲಿ 1ನೇ ನಂಬ್ರ ಬೂತ್ ಹೊರತಾಗಿ ಇತರ ಮೂರು ಮತಗಟ್ಟೆಗಳಿವೆ.

RELATED NEWS

You cannot copy contents of this page