ಅನಧಿಕೃತ ಸಾಗಿಸಿದ  ೬೪೦.೩೯  ಗ್ರಾಂ ಚಿನ್ನ ವಶ ಯುವತಿ  ಕಸ್ಟಡಿಗೆ

ಕೊಚ್ಚಿ: ನೆಡುಂಬಾಶ್ಶೇರಿ ಅಂತಾ ರಾಷ್ಟ್ರ ವಿಮಾನ ನಿಲ್ದಾಣ ಮೂಲಕ ಅನಧಿಕೃತವಾಗಿ ಸಾಗಿಸಲು ಯತ್ನಿ ಸಿದ ೬೪೦.೩೯ ಗ್ರಾಂ ಚಿನ್ನವನ್ನು ಕಸ್ಟಮ್ಸ್ ಇಂಟೆಲಿಜೆನ್ಸ್ ವಿಭಾಗ ವಶಪಡಿಸಿದೆ. ಕಣ್ಣೂರು ನಿವಾಸಿ ಜೋಸಿ ಎಂಬಾಕೆಯ  ಕೈಯಿಂದ ಚಿನ್ನ ವಶಪಡಿಸಿ ಈಕೆಯನ್ನು  ಕಸ್ಟಡಿಗೆ ತೆಗೆಯಲಾಗಿದೆ. ವಿಮಾನ ನಿಲ್ದಾಣದಲ್ಲಿ ತಪಾಸಣೆ ಪೂರ್ಣ ಗೊಳಿಸಿ ಹೊರಗೆ ತೆರಳಲು ಯತ್ನಿ ಸುತ್ತಿದ್ದಂತೆ ಯುವತಿಯನ್ನು ಗ್ರೀನ್ ಚಾನೆಲ್‌ನಲ್ಲಿ ತಡೆದು ನಿಲ್ಲಿಸಿ ಬ್ಯಾಗ್ ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ. ಚಿನ್ನಕ್ಕೆ ೩೪.೬೫ ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾ ಗಿದೆ. ಯುವತಿ ಇಟೆಲಿಯಿಂದ ದೋಹಾ ಮೂಲಕ ಕೊಚ್ಚಿಗೆ ತಲುಪಿರುವುದಾಗಿ ತಿಳಿಸಲಾಗಿದೆ.

You cannot copy contents of this page