ಮಂಜೇಶ್ವರದ ವಿವಿಧೆಡೆ ಕರ್ನಾಟಕ ಬಿಜೆಪಿ ಮುಖಂಡರಿಂದ ಮತ ಯಾಚನೆ

ಉಪ್ಪಳ: ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಕಾವು ಬಿರುಸುಗೊಂಡಿರುವAತೆ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್‌ರ ಪರ ಪ್ರಚಾರಾರ್ಥವಾಗಿ ಕರ್ನಾಟಕದ ಬಿಜೆಪಿ ಮುಖಂಡರು ಮಂಜೇಶ್ವರ ಮಂಡಲದಲ್ಲಿ ನಿನ್ನೆ ವಿವಿಧೆಡೆ ಮತಯಾಚನೆ ನಡೆಸಿದರು. ಮಂಗಲ್ಪಾಡಿಯ ಹೇರೂರಿನಲ್ಲಿ, ಪೈವಳಿಕೆ ಪಂಚಾಯತ್‌ನ ತಾಳ್ತಾಜೆ ಪರಿಶಿಷ್ಟ ವರ್ಗದ ಕಾಲನಿಗೆ ಬಿಜೆಪಿ ಕಾರ್ಯಕರ್ತರ ಜೊತೆ ಕರ್ನಾಟಕ ಮಾಜಿ ಸಚಿವ ಅಂಗಾರ ಭೇಟಿ ಮಾಡಿ ಮತಯಾಚನೆ ನಡೆಸಿದರು. ಈ ವೇಳೆ ಪಂಚಾಯತ್ ಸದಸ್ಯ ರಾಮ ಏದಾರ್, ಗಣೇಶ ಚೇರಾಲು, ಕಾರ್ಯಕರ್ತರು ಉಪಸ್ಥಿತ ರಿದ್ದರು. ಕುಂಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ಕುಟುಂಬ ಸಭೆಗಳಲ್ಲಿ ಭಾಗವಹಿಸಿದರು. ವರ್ಕಾಡಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು. ಈ ವೇಳೆ ಬಿಜೆಪಿ ನೇತಾರರು ಕಾರ್ಯಕರ್ತರು ಉಪಸ್ಥಿತರಿದ್ದರು.

RELATED NEWS

You cannot copy contents of this page