ಅನಿವಾಸಿ ಮತದಾರರು ಅತೀ ಕಡಿಮೆ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ: ಹೆಚ್ಚು ತೃಕರಿಪುರದಲ್ಲಿ


ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 4726 ಪುರುಷ ಮತದಾರರು ಹಾಗೂ 208 ಮಹಿಳಾ ಮತದಾರರು ಅನಿವಾಸಿಗಳಾಗಿದ್ದಾರೆ. ಒಟ್ಟು 4934 ಮಂದಿ ಮತದಾರರು ವಿವಿಧ ದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಇವರಲ್ಲಿ ಮಂಜೇಶ್ವರ ಮಂಡಲದಲ್ಲಿ 598 ಪುರುಷರು, 22 ಮಹಿಳೆಯರು, ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ 204 ಪುರುಷರು, 22 ಮಹಿಳೆಯರು ಅನಿವಾಸಿಗಳಾಗಿದ್ದಾರೆ. ಉದುಮದಲ್ಲಿ 315 ಪುರುಷರು, 23 ಮಹಿಳೆಯರು, ಕಾಞಂಗಾಡ್ ಮಂಡಲದಲ್ಲಿ 834 ಪುರುಷರು, 30 ಮಹಿಳೆಯರು, ತೃಕರಿಪುರ ಮಂಡಲದಲ್ಲಿ 1206 ಪುರುಷರು, 36 ಮಹಿಳೆಯರು, ಪಯ್ಯನ್ನೂರು ಮಂಡಲದಲ್ಲಿ 447 ಪುರುಷರು, 30 ಮಹಿಳೆಯರು, ಕಲ್ಯಾಶ್ಶೇರಿಯಲ್ಲಿ 1122 ಪುರುಷರು, 45 ಮ ಹಿಳೆಯರು ಹೊರದೇಶಗಳಲ್ಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page