ಅಪರಿಮಿತ ಮೊಬೈಲ್ ಫೋನ್ ವೀಕ್ಷಣೆ: ಆಗುತ್ತಿದೆ ವಿಲ್ಲನ್: ಪ್ರತೀ 10 ಮಕ್ಕಳಲ್ಲಿ ಓರ್ವರಿಗೆ ದೃಷ್ಟಿ ದೋಷ ಪತ್ತೆ
ಕಾಸರಗೋಡು: ಅಪರಿಮಿತವಾದ ರೀತಿಯಲ್ಲಿ ಮೊಬೈಲ್ ಫೋನ್ ವೀಕ್ಷಣೆ ಈಗ ಮಕ್ಕಳಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಹೀಗೆ ಅಮಿತವಾದ ರೀತಿಯಲ್ಲಿ ಮೊಬೈಲ್ ಫೋನ್ ವೀಕ್ಷಿಸುವ ಪ್ರತೀ ಹತ್ತು ಮಕ್ಕಳಲ್ಲಿ ತಲಾ ಓರ್ವನಿಗೆ ಅತೀ ವೇಗದಲ್ಲಿ ದೃಷ್ಟಿ ದೋಷ ಉಂಟಾಗುತ್ತಿರುವುದನ್ನು ನೇತ್ರ ತಪಾಸಣೆಯೂ ಪತ್ತೆಹಚ್ಚಲಾಗಿದೆ.
ರಾಷ್ಟ್ರೀಯ ಆಯುಷ್ಯ ಮಿಷನ್ ಆಶ್ರಯದಲ್ಲಿ ಜ್ಯಾರಿಗೊಳಿಸಲಾ ಗಿರುವ ದೃಷ್ಟಿ ಯೋಜನೆ ಪ್ರಕಾರ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳ ದೃಷ್ಟಿ ಪರೀಕ್ಷಾ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಇದರಂತೆ ಜಿಲ್ಲೆಯಲ್ಲಿ ಈ ತನಕ 16 ಶಿಬಿರಗಳನ್ನು ನಡೆಸಲಾಗಿದ್ದು, ಅದರಲ್ಲಿ ೧೪೪ ವಿದ್ಯಾರ್ಥಿಗಳಲ್ಲಿ ದೃಷ್ಟಿದೋಷ ಪತ್ತೆಹಚ್ಚಲಾಗಿದೆ. ಮಾತ್ರವಲ್ಲ ಇದರಲ್ಲಿ 14 ವಿದ್ಯಾರ್ಥಿಗಳಲ್ಲಿ ಗಂಭೀರ ದೃಷ್ಟಿದೋಷ ಪತ್ತೆಯಾಗಿದೆ. ಒಟ್ಟು ೭೮೪ ವಿದ್ಯಾರ್ಥಿಗಳನ್ನು ಇಂತಹ ಶಿಬಿರಗಳಲ್ಲಾಗಿ ದೃಷ್ಟಿದೋಷ ಪರೀಕ್ಷೆಗೊಳಪಡಿಸಲಾಗಿತ್ತು.
ಅಮಿತವಾದ ರೀತಿಯಲ್ಲಿ ಮೊಬೈಲ್ ಫೋನ್ ವೀಕ್ಷಣೆ ಮತ್ತು ಬಳಕೆಯು ವಿದ್ಯಾರ್ಥಿಗಳಲ್ಲಿ ದೃಷ್ಟಿದೋಷಕ್ಕೆ ಪ್ರಧಾನ ಕಾರಣಗಳಲ್ಲೊಂದಾಗಿದೆ. ಇದರ ಹೊರತಾಗಿ ಅಪರಿಮಿತ ರೀತಿಯ ಟಿವಿ ವೀಕ್ಷಣೆ, ಜಂಕ್‌ಫುಡ್, ಸಿಹಿ ಆಹಾರ ಪದಾರ್ಥಗಳು, ಎಣ್ಣೆಯಲ್ಲಿ ಹುರಿದ ಆಹಾರಗಳು, ಕಾರ್ಬೊನೇಟೆಡ್ ಪಾನೀಯ ಇತ್ಯಾದಿಗಳ ಅಮಿತ ಸೇವನ, ಅಗತ್ಯದಷ್ಟು ನೀರು ಕುಡಿಯದಿರುವುದು, ಸಮಯಕ್ಕೆ ಸರಿಯ ಬದಲಾಯಿಸಿ ಆಹಾರ ಸೇವನೆ, ಸರಿಯಾದ ಪೌಷ್ಠಿಕಾಂಶ ವಿಲ್ಲದ ಆಹಾರ ಬಳಕೆ, ದೈಹಿಕ ವ್ಯಾಯಾಮವಿಲ್ಲದಿರುವಿಕೆ, ಹಗಲು ನಿದ್ದೆ ಮಾಡುವಿಕೆ, ರಾತ್ರಿ ತಡವಾಗಿ ನಿದ್ರಿಸುವುದು ಇತ್ಯಾದಿಗಳು ದೃಷ್ಟಿದೋಷ ವುಂಟಾಗಲು ಇತರ ಕಾರಣಗಳಾಗಿವೆ ಎಂದು ವೈದ್ಯರು ಹೇಳುತ್ತಿದ್ದಾರೆ.
ಹೀಗೆ ದೃಷ್ಟಿದೋಷ ಪತ್ತೆಯಾದ ವಿದ್ಯಾರ್ಥಿಗಳಲ್ಲಿ ಬಹುಪಾಲು ಮಂದಿ ದೈನಂದಿನ ಗಂಟೆಗಳ ಕಾಲ ಮೊಬೈಲ್ ಫೋನ್ ವೀಕ್ಷಿಸುವ ಹಾಗೂ ಬಳಸುವವರಾಗಿದ್ದಾರೆಂದೂ ಪರೀಕ್ಷೆಯಲ್ಲಿ ಪತ್ತೆಹಚ್ಚಲಾಗಿದೆ. ಇಂತಹ ದೃಷ್ಟಿದೋಷ ಪತ್ತೆಯಾದ ಮಕ್ಕಳ ಪೈಕಿ ಕೆಲವರಲ್ಲಿ ಹಸಿವು ಇಲ್ಲದಿರುವಿಕೆ, ವಿಸರ್ಜನೆ ಸಮಸ್ಯೆ, ಉದಯ ಸಮಸ್ಯೆಗೆ ಸಂಬಂಧಿಸಿದ ಖಾಯಿಲೆಗಳಿಂದ ಬಳಲುತ್ತಿರುವುದನ್ನು ಪತ್ತೆಹಚ್ಚಲಾಗಿದೆ.