ಬಾಲಕಿಯ ಮುಂದೆ ನಗ್ನತೆ ಪ್ರದರ್ಶನ: ಮಣಿಯಂಪಾರೆಯಲ್ಲಿ ವಾಸಿಸುವ ಯುವಕ ಸೆರೆ

ಕುಂಬಳೆ: 12ರ ಹರೆಯದ ಬಾಲಕಿಯ ಮುಂದೆ ನಗ್ನತೆ ಪ್ರದ ರ್ಶಿಸಿದ ಯುವಕನನ್ನು ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ವಯನಾಡ್ ಕಲ್ಪೆಟ್ಟ ನಿವಾಸಿಯೂ ಶೇಣಿ ಮಣಿಯಂಪಾರೆ ಯಲ್ಲಿ ವಾಸಿಸುವ ಅದ್‌ನುಲ್ ಫಾರಿಸ್ (22) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್, ಎಸ್‌ಐಗಳಾದ ಕೆ. ಸನಿತ್, ಅನಂತಕೃಷ್ಣನ್ ಆರ್. ಮೆನೋನ್ ಎಂಬಿವರು ಸೇರಿ ಬಂಧಿಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾ ಲಯದಲ್ಲಿ ಹಾಜರು ಪಡಿಸಲಾಗುವುದು.

ನಿನ್ನೆ ಬಾಲಕಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಕಾರಿನೊಂದಿಗೆ ತಲುಪಿದ ಅದ್‌ನುಲ್ ಫಾರಿಸ್ ಬಾಲಕಿಯ ಸಮೀಪಕ್ಕೆ ತಲುಪಿ ಕುಂಬಳೆಗೆ ಹೋಗುವ ರಸ್ತೆ ಯಾವುದೆಂದು ಕೇಳಿದ್ದಾನೆನ್ನಲಾಗಿದೆ. ಬಾಲಕಿ ದಾರಿ ತಿಳಿಸುತ್ತಿದ್ದಂತೆ ಅದ್‌ನುಲ್ ಫಾರಿಸ್ ನಗ್ನತೆ ಪ್ರದರ್ಶಿಸಿರುವುದಾಗಿ ದೂರಲಾಗಿದೆ. ಇದರಿಂದ ಭಯಗೊಂಡ ಬಾಲಕಿ ಓಡಿ ಅಂಗಡಿಗೆ ತಲುಪಿ ವಿಷಯ ತಿಳಿಸಿದ್ದಾಳೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿ ಕಾರಿನ ನಂಬ್ರ ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಗಂಟೆಗಳೊಳಗೆ ಸೆರೆ ಹಿಡಿಯಲವು ಸಾಧ್ಯವಾಗಿದೆ.

RELATED NEWS

You cannot copy contents of this page