ಅಬಕಾರಿ ಸಚಿವ ಎಂ.ಬಿ. ರಾಜೇಶ್ ವಿದೇಶ ಪ್ರಯಾಣ

ತಿರುವನಂತಪುರ: ಅಬಕಾರಿ ಇಲಾಖೆ ಸಚಿವ ಎಂ.ಬಿ. ರಾಜೇಶ್ ವಿದೇಶ ಪ್ರಯಾಣಕ್ಕೆ ತೆರಳಿದರು. ಫ್ರಾನ್ಸ್, ಬೆಲ್ಜಿಯಂ, ಆಸ್ಟ್ರಿಯ ಮೊದಲಾದ ದೇಶಗಳನ್ನು ಸಂದರ್ಶಿಸುವರೆಂಬ ಮಾಹಿತಿ ಲಭಿಸಿದೆ. ಕುಟುಂಬ ಸಹಿತ ಸಚಿವರು  ಯಾತ್ರೆ ಗೈಯ್ಯುತ್ತಿದ್ದಾರೆ. ಖಾಸಗಿ ಪ್ರಯಾಣವಾದ ಕಾರಣ ಸರಕಾರಿ ಫಂಡ್ ಉಪಯೋಗಿಸಿ ಅಲ್ಲ ಸಂಚಾರವೆಂದು ಸಚಿವರ ಕಚೇರಿಗೆ ಸಂಬಂಧಿಸಿದ ವಕ್ತಾರರು ತಿಳಿಸಿದ್ದಾರೆ.

ಮದ್ಯನೀತಿ ಬದಲಿಸಲು ಸರಕಾರಕ್ಕೆ ವಂತಿಗೆ ನೀಡಬೇಕೆಂಬ ಬಾರ್ ಅಸೋಸಿಯೇಶನ್ ಮುಖಂಡನ ವಿವಾದ ಶಬ್ದ ಸಂದೇಶ ಬಹಿರಂಗಗೊಂಡಿರುವುದರೊಂದಿಗೆ ಗೂಢಾಲೋಚನೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಸಚಿವ ಡಿಜಿಪಿಗೆ ಪತ್ರ ನೀಡಿದ್ದರು. ಈ ವಿಷಯವೆಲ್ಲಾ ವಿವಾದವಾಗಿರುವಾಗ ಸಚಿವರು ವಿದೇಶ ಪ್ರಯಾಣ ನಡೆಸಿದ್ದಾರೆ.

You cannot copy contents of this page