ಅಯೋಧ್ಯೆ ಶ್ರೀರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರದಾಸ್ ನಿಧನ
ಲಕ್ನೋ: ಅಯೋಧ್ಯೆ ಶ್ರೀರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರದಾಸ್ (87) ಇಂದು ಬೆಳಿಗ್ಗೆ ಲಕ್ನೋ ಪಿಜಿಐ ಆಸ್ಪತ್ರೆಯಲ್ಲಿ ನಿಧನರಾದರು.
1992 ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಶ್ರೀರಾಮ ಮಂದಿರದ ಅರ್ಚಕರಾಗಿದ್ದರು. ಅಯೋಧ್ಯೆಯಲ್ಲಿ ಹೊಸ ರಾಮಮಂದಿರದ ಪವಿತ್ರೀಕರಣ ಸಮಾರಂಭದ ನಂತರ ಸತ್ಯೇಂದ್ರದಾಸ್ ಅದರ ಮುಖ್ಯ ಅರ್ಚಕರಾಗಿ ಮುಂದುವರಿಯುತ್ತಿದ್ದರು. ಇವರ ನಿಧನಕ್ಕೆ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ದೇವಾಲಯದ ಆಡಳಿತ ಸಮಿತಿ ಸಂತಾಪ ವ್ಯಕ್ತಪಡಿಸಿದೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಇತರ ಹಲವು ಗಣ್ಯರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.