ಅರಣ್ಯದಲ್ಲಿ ವನ್ಯಜೀವಿ ಬೇಟೆ ನಾಡ ಬಂದೂಕು ಸಹಿತ ಮೂವರ ಸೆರೆ

ಕಾಸರಗೋಡು: ಅರಣ್ಯಕ್ಕೆ ಅಕ್ರಮವಾಗಿ ನುಗ್ಗಿ ವನ್ಯಜೀವಿಗಳ ಬೇಟೆಯಲ್ಲಿ ತೊಡಗಿದ್ದ ಮೂವರನ್ನು ಅರಣ್ಯ ಪಾಲಕರು ಸೆರೆ ಹಿಡಿದಿದ್ದಾರೆ.

ಪನತ್ತಡಿ ಅರಣ್ಯ ವಿಭಾಗದ ಪೆನ್ನಿಕ್ಕರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಕಾರ್ಯಾಚರಣೆ ನಡೆದಿದೆ. ಇದಕ್ಕೆ ಸಂಬಂಧಿಸಿ ರಾಜಪುರ ಪನತ್ತಡಿಗೆ ಸಮೀಪದ ಅಡ್ಕಂ ಪುದಿಯ ಕೊಡಿಯ ಕೆ. ಸತೀಶನ್ (೩೭), ಪೆರುಂಬಳ್ಳಿಯ ಕೆ. ವಿನೀತ್ (೩೨) ಮತ್ತು ಆರ್. ಶ್ರೀಜಿತ್ (೩೨) ಎಂಬಿವರನ್ನು ಅರಣ್ಯ ಪಾಲಕರು ಬಂಧಿಸಿದ್ದಾರೆ. ಇವರಿಂದ ಎರಡು ನಾಡ ಬಂದೂಕು, ಮೂರು ಬುಲ್ಲೆಟ್‌ಗಳು, ೩ ಟೋರ್ಚ್‌ಗಳನ್ನು  ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ತಂಡ ದಲ್ಲಿ ಒಳಗೊಂಡಿದ್ದ ಇತರ ಮೂವರು ಪರಾರಿಯಾಗಿದ್ದಾರೆ. ಮಲೆನಾಡು ಅರಣ್ಯ ಪ್ರದೇಶಗಳಲ್ಲಿ ರಾತ್ರಿ ವೇಳೆ ವ್ಯಾಪಕವಾಗಿ ವನ್ಯಜೀವಿಗಳ ಬೇಟೆ ನಡೆಯುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಅರಣ್ಯ ಇಲಾಖೆಗೆ ಲಭಿಸ ತೊಡಗಿದೆ. ಇದರಂತೆ ಪನತ್ತಡಿ ಅರಣ್ಯ ವಿಭಾಗ ಅರಣ್ಯಾಧಿಕಾರಿ ಬಿ. ಶೇಷಪ್ಪರ ನೇತೃತ್ವದ ಅರಣ್ಯ ಪಾಲಕರ ತಂಡ ಹಲವು ವಾರಗಳಿಂದ ಅರಣ್ಯದಲ್ಲಿ ವ್ಯಾಪಕ ಶೋಧ ಆರಂಭಿಸಿತ್ತು. ಮೂರು ತಿಂಗಳ ಹಿಂದೆ ಬಳಾಂತ್ತೋಡಿನಲ್ಲಿ ಅರಣ್ಯ ಪಾಲಕರು ನಡೆಸಿದ ಕಾರ್ಯಾಚರಣೆಯಲ್ಲಿ ಬೇಟೆಗಾರರ ತಂಡವೊಂದನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಫಾರೆಸ್ಟ್ ಆಫೀಸರ್ ಶೇಷಪ್ಪ, ಬೀಟ್ ಫಾರೆಸ್ಟ್ ಆಫೀಸರ್ ಆರ್.ಕೆ. ರಾಹುಲ್, ತಾತ್ಕಾಲಿಕ ಸಿಬ್ಬಂದಿಗಳು ಸೇರಿ ಪೆನ್ನಿಕ್ಕರದಲ್ಲಿ ನಿನ್ನೆ ಕಾರ್ಯಾಚರಣೆ ನಡೆಸಿ ಮೂವರನ್ನು ಸೆರೆ ಹಿಡಿದ್ದಾರೆ. ಪರಾರಿಯಾದ ಮೂವರ ಪತ್ತೆಗಾಗಿ ಅರಣ್ಯ ಪಾಲಕರು ಶೋಧ ತೀವ್ರಗೊಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page