ಅಸೀಫ್‌ರ ಮರಣದ ತನಿಖೆ ಸಿಬಿಐಗೆ ನೀಡಬೇಕು-ಕಾಂಗ್ರೆಸ್

ಬಾಯಾರು ; ಬಾಯಾರು ಗಾಳಿಯಡ್ಕದ ಮೊಹಮ್ಮದ್ ಆಸೀಫ್ ರÀ ಮರಣದಲ್ಲಿನ ನಿಗೂಢತೆ ಹೊರ ತರುವಲ್ಲಿ ಕೇರಳ ಕ್ರೈಬ್ರಾಂಚ್ ಸಂಪೂರ್ಣ ವಿಫಲವಾಗಿದ್ದು ನಿಷ್ಪಕ್ಷ ತನಿಖೆಯ ನಡೆಸಲು ಸರಕಾರ ಮುಂದಾಗಬೇಕೆAದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಪಿ. ಪ್ರದೀಪ ಕುಮಾರ್ ಒತ್ತಾಯಿಸಿದರು. ಆಸೀಫ್ ನ ಮರಣ ವ್ಯವಸ್ಥಿತ ಕೊಲೆ ಎಂದು ಪೋಸ್ಟ್ ಮಾರ್ಟಂ ವರದಿಯಲ್ಲಿ ವ್ಯಕ್ತವಾಗಿದ್ದರೂ ಅದಕ್ಕೆ ಕಾರಣರಾದ ವ್ಯಕ್ತಿಗಳನ್ನು ಸಂರಕ್ಷಿಸಲು ಕೇರಳ ಪೊಲೀಸರು ಅಥವಾ ಆಡಳಿತ ಪಕ್ಷ ಮುಂದಾಗುತ್ತಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನ್ಯಾಯಾಲದ ಮೂಲಕ ಹಾಗೂ ರಾಜಕೀಯ ಹೋರಾಟ ನಡೆಸಲು ಸಿದ್ಧವಾಗಿದೆ ಎಂದು ಅವರು ಹೇಳಿದರು. ಆಸೀಫನ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಎಂಬ ಬೇಡಿಕೆ ಇರಿಸಿ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಬಾಯಾರುಪದವಿನಲ್ಲಿ ನಡೆದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮಂಡಲ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಯುವ ಕಾಂಗ್ರೆಸ್ ಬ್ಲೋಕ್ ಅಧ್ಯಕ್ಷ ಜುನೈದ್ ಉರ್ಮಿ, ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ಮೋಹನ ರೈ ಕಯ್ಯಾರ್, ನಾರಾಯಣ ಏದಾರ್, ಬ್ಲೋಕ್ ಕಾರ್ಯದರ್ಶಿ ಗಳಾದ ರಾಘವೇಂದ್ರ ಭಟ್, ಸಚ್ಚಿದಾನಂದ ರೈ, ಮುಸ್ಲಿಂ ಲೀಗ್ ಪಂಚಾಯತ್ ಸಮಿತಿ ಕಾರ್ಯದರ್ಶಿ ಅಸೀಸ್ ಕಳಾಯಿ ಮಾತನಾಡಿದರು. ಚನಿಯಪ್ಪ ಮಾಸ್ತರ್, ಮುಸ್ತಫ, ಅಬ್ದುಲ್ಲಾ ಹಾಜಿ, ನೌಶಾದ್ ಪಟ್ಲ, ಜೀವನ್ ಕ್ರಾಸ್ತ, ಗಂಗಾಧರ ನಾಯಕ್, ಸುಬ್ರಾಯ ಸಾಯ, ನವಾಸ್ ಕನಿಯಾಲ, ರಜÁಕ್ ಚೇರಾಲು , ಹನೀಫ ಗಾಳಿಯಡ್ಕ, ಸುಲೈಖ ಮೊದಲಾದವರು ಉಪಸ್ಥಿತರಿದ್ದರು. ಶಾಜಿ ಎನ್.ಸಿ. ಸ್ವಾಗತಿಸಿದರು. ಶಿವರಾಮ ಶೆಟ್ಟಿ ಧನ್ಯವಾದವಿತ್ತರು.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page