ಅಸೌಖ್ಯ: ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ನಿಧನ

ಪೈವಳಿಕೆ: ಕಯ್ಯಾರು ಪರಂಬಳ ನಿವಾಸಿ ನಾರಾಯಣ ನಾಯ್ಕ್ವರ ಪುತ್ರ ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ಗುರುಪ್ರಸಾದ್ [43] ನಿಧನರಾದರು. ಹಲವು ದಿನಗಳ ಹಿಂದೆ ಅಸೌಖ್ಯ ಬಾಧಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ನಿನ್ನೆ ಮುಂಜಾನೆ ನಿಧನರಾದರು. ಇಲೆಕ್ಟಿçÃಷ್ಯನ್ ಆಗಿದ್ದರು. ಬಿಜೆಪಿ ಪರಂಬಳ 116ನೇ ಬೂತ್ ಅಧ್ಯಕ್ಷರಾಗಿದ್ದಾರೆ. ದುರ್ಗಾಶಕ್ತಿ ಕುಣಿತ ಭಜನಾ ಸಂಘ ಪರಂಬಳ ಇದರ ವ್ಯವಸ್ಥಾಪಕರಾಗಿದ್ದರು. ಎ.ಕೆ.ಎಸ್ ಕಯ್ಯಾರು ವಿಲೇಜ್ ಸಮಿತಿ ಅಧ್ಯಕ್ಷರಾಗಿದ್ದರು. ಮೃತರು ತಂದೆ, ತಾಯಿ ಜಯಂತಿ, ಪತ್ನಿ ಸುಜಾತ, ಪುತ್ರ ವೀಕ್ಷಿತ್, ಸಹೋದರರಾದ ಗೋಪಾಲ, ಸುಭಾಶ್, ಲಕ್ಷಿ÷್ಮÃಶ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page