ಬಿಎಂಎಸ್ ಜಿಲ್ಲಾ ಕಾರ್ಯಾಲಯಕ್ಕೆ 3ರಂದು ಶಿಲಾನ್ಯಾಸ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘದ ಕಾಸರಗೋಡು ಜಿಲ್ಲಾ ಕಾರ್ಯಾಲಯಕ್ಕೆ ಕರಂದಕ್ಕಾಡ್ ಶಿವಾಜಿನಗರದಲ್ಲಿ ಎ. 3ರಂದು ಭೂಮಿಪೂಜೆ ಹಾಗೂ ಶಿಲಾನ್ಯಾಸ ನಡೆಸಲಾಗುವುದು. ಅಂದು ಬೆಳಿಗ್ಗೆ 9.30ಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಕ್ಷೇತ್ರ ಪ್ರಚಾರಕ್ ಪಿ.ಎನ್. ಹರಿಕೃಷ್ಣ ಕುಮಾರ್ ಶಿಲಾನ್ಯಾಸ ನೆರವೇರಿಸುವರು. ಬಿಎಂಎಸ್ ಅಖಿಲಭಾರತ ಉಪಾಧ್ಯಕ್ಷ ಸಿ. ಉಣ್ಣಿಕೃಷ್ಣನ್ ಉಣ್ಣಿತ್ತಾನ್, ದಕ್ಷಿಣ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಎಂ.ಪಿ. ರಾಜೀವನ್, ರಾಜ್ಯಾಧ್ಯಕ್ಷ ಬಿ. ಶಿವಜಿ ಸುದರ್ಶನನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಕೆ. ಅಜಿತ್, ಸಂಘಟನಾ ಕಾರ್ಯದರ್ಶಿ ಕೆ. ಮಹೇಶ್ ಕುಮಾರ್, ಸಿ. ಬಾಲಚಂದ್ರನ್, ಪಿ. ಮುರಳೀಧರನ್ ಸಹಿತ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನೇತಾರರು, ಕಾರ್ಯಕರ್ತರು ಉಪಸ್ಥಿತರಿರುವರು.

You cannot copy contents of this page