ಅಸ್ಸಾಂ, ಪಂ. ಬಂಗಾಳ ಸಹಿತ ೪ ರಾಜ್ಯಗಳಲ್ಲಿ ಪ್ರಬಲ ಭೂಕಂಪ

ನವದೆಹಲಿ: ಈಶಾನ್ಯ ರಾಜ್ಯ ಗಳಾದ ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ ಸಹಿತ ದೇಶದ ನಾಲ್ಕು ರಾಜ್ಯಗಳಲ್ಲಿ ಪ್ರಬಲ ಭೂಕಂಪ ಅನುಭವ ಉಂಟಾಗಿದೆ. ಪಶ್ಚಿಮ ಬಂಗಾಳ ಮತ್ತು ತ್ರಿಪುರದಲ್ಲಿ ನಿನ್ನೆ ರಾತ್ರಿ ಭೂಮಿ ಕಂಪಿಸಿದೆ. ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರದ ಪ್ರಕಾರ ಮೇಘಾಲಯದಲ್ಲಿ ರಿಕ್ಟರ್ ಮಾಪಕದಲ್ಲಿ ೫.೨ರಷ್ಟು ಭೂಕಂಪ ಸಂಭವಿಸಿದೆ.

ಇದೇ ಸಮಯದಲ್ಲಿ ಉತ್ತರ ಬಂಗಾಳದ ಕೆಲವು ಭಾಗಗಳಲ್ಲಿಯೂ ಭೂಕಂಪನ ಅನುಭವಾಗಿದೆ. ಸಿಲಿಗುರಿ ಮತ್ತು ಬೆಹಾರ್ನಾದಲ್ಲಿ ಭೂಕಂಪ ಸಂಭವಿಸಿದೆ. ಆದರೆ ಯಾವುದೇ ಪ್ರಾಣ ಹಾನಿ ಅಥವಾ ಅಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ. ಮತ್ತೊಂದೆಡೆ ಡಾರ್ಜಿಲಿಂಗ್ ಬೆಟ್ಟದಲ್ಲೂ ಭೂಕಂಪದ ಅನುಭವವಾಗಿದೆ. ಉತ್ತರ ಬಂಗಾಳದಲ್ಲಿ ಅತೀ ಹೆಚ್ಚು ಹಾನಿವುಂಟಾಗಿದೆಯೆಂದು ವರದಿಗಳು ಸೂಚಿಸುತ್ತದೆ.

You cannot copy contents of this page