ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್
ವಿಶಾಖಪಟ್ಟಣಂ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗುದೇಶಂ ಪಾರ್ಟಿ (ಟಿಡಿಪಿ) ವರಿಷ್ಠ ಚಂದ್ರಬಾಬು ನಾಯ್ಡುರನ್ನು ಇಂದು ಮುಂಜಾನೆ ಆಂಧ್ರ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ೧೨ ಗಂಟೆಗೆ ಚಂದ್ರಬಾಬುರನ್ನು ಬಂಧಿಸಲು ಪೊಲೀಸರು ತಲುಪಿದ್ದು, ನಂತರ ಭಾರೀ ಹೈಡ್ರಾಮಾದ ನಡುವೆ ಇಂದು ಮುಂಜಾನೆ ೩ ಗಂಟೆಗೆ ಬಂಧಿಸಿದ್ದಾರೆ. ಬಂಧನದ ವೇಳೆ ವಾಗ್ದಾಳಿ ನಡೆಸಿದ ಚಂದ್ರಬಾಬು ನಾಯ್ಡು ಸಿಐಡಿ ಪೊಲೀಸರು ನನ್ನ ಹಕ್ಕು ಕಸಿಯುವ ಕೆಲಸ ಮಾಡಿದ್ದಾರೆ. ಎಫ್‌ಐಆರ್ ಮಾಡಿಲ್ಲ. ಯಾವುದೇ ನೋಟೀಸು ನೀಡಿಲ್ಲ ಮತ್ತು ಯಾಕೆ ನನ್ನನ್ನು ಬಂಧಿಸುತ್ತೀರಾ…? ಎಂದು ವಾಗ್ದಾಳಿ ನಡೆಸಿದ್ದಾರೆ.
ನಂದಾಲ ಫಂಕ್ಷನ್ ಹಾಲ್‌ನಲ್ಲಿ ತಂಗಿದ್ದ ಚಂದ್ರಬಾಬು ನಾಯ್ಡುರನ್ನು ಅಲ್ಲಿಂದ ಪೊಲೀಸರು ಬಂಧಿಸಿದ್ದಾರೆ. ವಿಷಯ ತಿಳಿದ ಟಿಡಿಪಿಯ ಭಾರೀ ಸಂಖ್ಯೆಯ ಕಾರ್ಯಕರ್ತರು ಅಲ್ಲಿ ಜಮಾಯಿಸಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿ ದರು. ಸ್ಕಿಲ್ ಹಗರಣ ಸಂಬಂಧ ಹೈಕೋ ರ್ಟ್ ಸೂಚನೆ ಮೇರೆಗೆ ಚಂದ್ರಬಾಬು ನಾಯ್ಡುರನ್ನು ಬಂಧಿಸಲಾಗಿದೆ ಯೆಂದು ಸಿಐಡಿ ಪೊಲೀಸರು ಕಾರಣ ನೀಡಿದ್ದಾರೆ. ಸಾರ್ವಜನಿಕರ ಹಣ ವನ್ನು ಲೂಟಿ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಅದರಂತೆ ಅವರನ್ನು ಬಂಧಿ ಲಾಗಿದೆಯೆಂದು ಪೊಲೀಸರು ವಿವರಿಸಿದಾರೆ. ಆಂಧ್ರ ಪ್ರದೇಶದ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೋರೇಶನ್ ಹಗರಣದಲ್ಲಿ ೩೭೧ ಕೋಟಿ ರೂಪಾ ಯಿಗಳ ಅಕ್ರಮ ನಡೆಸಲಾಗಿದೆಯೆಂಬ ಆರೋಪ ಉಂಟಾಗಿತ್ತು.