ಆಧಾರ್ ಲಿಂಕ್ ಮಾಡಿಸದ ೧೧.೫ ಕೋಟಿ ಪಾನ್‌ಕಾರ್ಡ್‌ಗಳು ನಿಷ್ಕ್ರಿಯ- ಆರ್.ಟಿ.ಐ
ನವದೆಹಲಿ: ಆಧಾರ್ ಕಾರ್ಡ್ ಲಿಂಕ್ ಮಾಡಿಸದ ಸುಮಾರು ೧೧.೫ ಕೋಟಿ ಪಾನ್‌ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿಗೆ (ಸಿ.ಬಿ.ಡಿ.ಟಿ) ಮಾಹಿತಿ ಹಕ್ಕು (ಆರ್.ಟಿ.ಐ) ನೀಡಿದ ಉತ್ತರದಲ್ಲಿ ತಿಳಿಸಿದೆ.
ಪಾನ್‌ಕಾರ್ಡ್‌ನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ನೀಡಲಾದ ಗಡುವು ಈ ವರ್ಷದ ಜೂನ್ ೩೦ರಂದು ಕೊನೆಗೊಂ ಡಿತ್ತು. ಭಾರತದಲ್ಲಿ ೭೦.೨೪ ಕೋಟಿ ಪಾನ್‌ಕಾರ್ಡ್ ಮಂದಿ ತಮ್ಮ ಪಾನ್‌ಕಾರ್ಡ್‌ನ್ನು ಆಧಾರ್‌ನೊಂ ದಿಗೆ ಲಿಂಕ್ ಮಾಡಿದ್ದಾರೆ. ೧೨ ಕೋಟಿಗೂ ಹೆಚ್ಚು ಮಂದಿ ಪಾನ್‌ಕಾರ್ಡ್ ನ್ನು ಆಧಾರ್‌ನೊಂ ದಿಗೆ ಜೋಡಣೆ ನಡೆಸಿಲ್ಲ. ಆದರಲ್ಲಿ ೧೧.೫ ಕೋಟಿ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಆರ್.ಟಿ.ಐ ತಿಳಿಸಿದೆ.ಆಧಾರ್ ತೆರಿಗೆ ಕಾಯ್ದೆಯ ಸೆಕ್ಷನ್ ೧೩೯ ಎ.ಎ.ಯ ಉಪ ಸೆಕ್ಷನ್ (೨) ಅಡಿಯಲ್ಲಿ ೨೦೧೭ ಜುಲೈ ೧ರಂದು ಅಥವಾ ಅದರ ಮೊದಲು ಪಾನ್‌ಕಾರ್ಡ್ ಮಂಜೂರು ಮಾಡಿದ ಪ್ರತಿ ಯೊಬ್ಬ ವ್ಯಕ್ತಿಯು ತನ್ನ ಆಧಾರ್ ನಂಬ್ರವನ್ನು ಪಾನ್ ಕಾರ್ಡ್‌ನೊಂದಿಗೆ ಜೋಡಣೆ ನಡೆಸಬೇಕೆಂದು ಸ್ಪಷ್ಟಪಡಿ ಸಲಾಗಿದೆ. ನಿಷ್ಕ್ರಿಯಗೊಂಡ ಪಾನ್‌ಕಾರ್ಡ್‌ನ್ನು ಮತ್ತೆ ಸಕ್ರಿಯಗೊಳಿಸುವ ಸಲುವಾಗಿ ೧೦೦೦ ರೂ.ಗಳ ದಂಡ ವಿಧಿಸಲಾಗುತ್ತದೆ.