ಆಧಾರ್-ವೋಟರ್ ಬದಲು  ಇನ್ನು ನಾಗರಿಕ ಕಾರ್ಡ್

ನವದೆಹಲಿ: ಆಧಾರ್ ಕಾರ್ಡ್ ಮತ್ತು ಮತದಾರ ಗುರುತಿನ ಚೀಟಿ ಕ್ರಮೇಣ ಇಲ್ಲದಾಗಿ ಅದರ ಬದಲು ಎರಡು ಕಾರ್ಡ್‌ಗಳ ಪೂರ್ಣ ಮಾಹಿತಿಗಳು ಒಳಗೊಂಡ ನಾಗರಿಕ ಕಾರ್ಡ್ ಎಂಬ ಹೊಸ ಕಾರ್ಡನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರಕಾರ ಮುಂದಾಗಿದೆ.

ನಾಗರಿಕ ಕಾರ್ಡ್ ಏಕಕಾಲದಲ್ಲಿ ಆಧಾಕಾರ್ಡ್ ಹಾಗೂ ಮತದಾರ ಗುರುತಿನ ಚೀಟಿಗಾಗಿ  ಕಾರ್ಯವೆಸ ಗಲಿದೆ. ಇದನ್ನು ನಾಗರಿಕರ ಗುರುತು ಮತ್ತು ಪೌರತ್ವದ ಪುರಾವೆಯಾಗಿ ಬಳಸಲಾಗುವ  ಬಹು ದಾಖಲೆಗಳ ಅಗತ್ಯ ಕಡಿಮೆಗೊಳ್ಳಲಿದೆ.

ನಾಗರಿಕ ಕಾರ್ಡ್ ಒಂದು ಆಧುನಿಕ  ಗುರುತಿನ ಚೀಟಿಯಾಗಿದೆ. ಇದನ್ನು ಭಾತದ ಪ್ರತಿಯೋರ್ವ ನಾಗರಿಕರಿಗೆ ನೀಡಲಾಗುವುದು.  ಈ ಕಾರ್ಡ್ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿದ್ದು, ಇದು ಪೌರತ್ವ ಮತ್ತು ಗುರುತಿನ ಪುರಾವೆಗಳನ್ನು ಒದಗಿಸಲಿದೆ.

ನಾಗರಿಕ ಕಾರ್ಡ್ ಪಡೆಯಲು ನಾಗರಿಕರು ರಾಷ್ಟ್ರೀಯ ಜನಸಂಖ್ಯೆ ನೋಂದಾವu (ಎನ್‌ಎಸ್‌ಪಿಆರ್) ಯಲ್ಲಿ ತಮ್ಮ ಮಾಹಿತಿಗಳನ್ನು ನವೀಕರಿಸಬೇಕಾಗುತ್ತದೆ. ವೈಯಕ್ತಿಕ ಮಾಹಿತಿಗಳನ್ನು ಎನ್‌ಪಿಆರ್ ಡೇಟಾಬೇಸ್‌ನಲ್ಲಿ ಸಲ್ಲಿಸಬೇಕಾಗುತ್ತಿದೆ. ಹೀಗೆ ನೀಡಲಾಗುವ ಮಾಹಿತಿಗಳ ಪರಿಶೀಲನೆಯ ನಂತರ ನಾಗರಿಕ ಕಾರ್ಡ್ ನೀಡಲಾಗುವುದು.

ಒಂದೇ ಕಾರ್ಡ್‌ನಲ್ಲಿ ಎಲ್ಲಾ ಮಾಹಿತಿಗಳು ಒಳಗೊಳ್ಳುವ ಕಾರ್ಡ್ ಇದಾಗಲಿದೆ. ಬಹು   ಗುರುತುಚೀಟಿಗಳ ಸಮಸ್ಯೆಗಳು ಇದು ನಿವಾರಿಸಲಿದೆ. ಸರಕಾರಿ ಸೇವೆಗಳ ಸೌಲಭ್ಯಗಳನ್ನು ತ್ವರಿತ ಮತ್ತು ಸುಲಭವಾಗಿ ಪಡೆಯಬಹುದು. ಆಡಳಿತಾತ್ಮಕ ಕೆಲಸಗಳ ಸರಳೀಕರಣದಲ್ಲಿ ಮತದಾರರ ಗುರುತಿನ ಚೀಟಿ, ಆಧಾರ್, ಪಾಸ್ ಪೋರ್ಟ್ ಇತ್ಯಾದಿ  ಸೇರಿದಂತೆ ಬಹು ದಾಖಲೆಗಳ ಅಗತ್ಯ ಕಡಿಮೆಯಾಗಲಿದೆ.

ಆದರೂ ನಾಗರಿಕ ಕಾರ್ಡ್ ಜ್ಯಾರಿಗೊಳಿಸುವುದು ಇನ್ನೊಂದೆಡೆ ಭಾರೀ ಸವಾಲುಗಳನ್ನು ತಲೆಯೆತ್ತುವಂತೆ ಮಾಡಲಿದೆ. ಅದರಲ್ಲಿ ವಿಶೇಷವಾಗಿ ವೈಯಕ್ತಿತ ಗೌಪ್ಯತೆ ಹಾಗೂ ಅದನ್ನು ಸುರಕ್ಷಿತವಾಗಿರಿಸುವುದು ದೊಡ್ಡ ಸವಾಲಾಗಿ ತಲೆಯೆತ್ತುವ ಸಾಧ್ಯತೆ ಇದೆ. ಅದನ್ನೆಲ್ಲಾ ಪರಿಹರಿಸಿ ನಾಗರಿಕ ಕಾರ್ಡ್‌ನ್ನು ಜಾರಿಗೊಳಿಸುವುದಲ್ಲಿ ಕೇಂದ್ರ ಸರಕಾರ ಎಷ್ಟರ ಮಟ್ಟಿಗೆ ಸಫಲವಾಗಬಹುದು ಹಾಗೂ ಇದು ಎಷ್ಟು ಪರಿಣಾಮಕಾರಿ ಯಾಗಲಿದೆ ಯೆಂಬುವುದನ್ನು ಕಾದುನೋಡಬೇಕಾಗಿದೆ.

Leave a Reply

Your email address will not be published. Required fields are marked *

You cannot copy content of this page