ಆನ್‌ಲೈನ್‌ನಲ್ಲಿ ಮಾದಕ ಪದಾರ್ಥ ಖರೀದಿಸಿ ಮಾರಾಟ ಮಾಡುತ್ತಿದ್ದ ಯುವತಿ, ಯುವಕ ಸೆರೆ

ಕೊಚ್ಚಿ: ಆನ್‌ಲೈನ್‌ನಲ್ಲಿ ಮಾದಕ ಪದಾರ್ಥ ಖರೀದಿಸಿ ಮಾರಾಟ ನಡೆಸುತ್ತಿದ್ದ ಯುವತಿ ಹಾಗೂ ಯುವಕನನ್ನು ಅಬಕಾರಿ ತಂಡ ಸೆರೆ ಹಿಡಿದಿದೆ. ಲಕ್ಷದ್ವೀಪ ನಿವಾಸಿ ಫರೀದ (27), ಎರ್ನಾಕುಳಂ ನಿವಾಸಿ ಶಿವದಾಸನ್ (25) ಎಂಬಿವರನ್ನು ಕೊಚ್ಚಿ ಯ ವಸತಿಗೃಹದಿಂದ ಸೆರೆ ಹಿಡಿಯಲಾಗಿದೆ. 3.7 ಗ್ರಾಂ ಎಂಡಿಎಂಎ ಹಾಗೂ 30 ಎಲ್‌ಎಸ್‌ಡಿ ಸ್ಟಾಂಪ್‌ಗಳನ್ನು ಇವರಿಂದ ವಶಪಡಿಸ ಲಾಗಿದೆ. ಈ ಮಧ್ಯೆ ಆಪರೇಷನ್ ಡಿ-ಹಂಟ್‌ನಂಗವಾಗಿ ಇತ್ತೀಚೆಗೆ ನಡೆಸಿದ ವ್ಯಾಪಕ ತಪಾಸಣೆಯಲ್ಲಿ ಮಾದಕ ಪದಾರ್ಥ ಸಹಿತ 123 ಮಂದಿ ಸೆರೆಯಾಗಿದ್ದಾರೆ. 107 ಪ್ರಕರಣಗಳನ್ನು ದಾಖಲಿಸಲಾ ಗಿದೆ. ಒಟ್ಟು 1.2 ಕಿಲೋ ಗ್ರಾಂ ಎಂಡಿಎಂಎ, 8.6 ಕಿಲೋ ಗ್ರಾಂ ಗಾಂಜಾ, 66 ಗಾಂಜಾ ಬೀಡಿಯನ್ನು ವಶಪಡಿಸಲಾಗಿದೆ.

You cannot copy contents of this page