ರಬ್ಬರ್ ಕೃಷಿಕ ತೋಟದ ಶೆಡ್‌ನಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ರಬ್ಬರ್ ಕೃಷಿಕರೊ ಬ್ಬರು ತೋಟದ ಶೆಡ್‌ನಲ್ಲಿ  ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಚಂಬಲ್ತಿಮಾರ್ ಅಲಕ್ಕೆಲ್ ನಿವಾಸಿ ಜೋಸ್ ಅಲಕ್ಕೆಲ್ (70) ಎಂಬವರು ಮೃತ ವ್ಯಕ್ತಿ. ಇವರಿಗೆ  ವಿದ್ಯಾಗಿರಿಯಲ್ಲಿ ರಬ್ಬರ್ ತೋಟವಿದೆ. ನಿನ್ನೆ ಮಧ್ಯಾಹ್ನ  ತೋಟಕ್ಕೆ ತೆರಳಿದವರು ಮರಳಿ ಬಾರದ ಹಿನ್ನೆಲೆಯಲ್ಲಿ ಶೋಧ ನಡೆಸಿದಾಗ ತೋಟದ ಶೆಡ್‌ನಲ್ಲಿ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆನ್ನ ಲಾಗಿದೆ.  ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಮೃತದೇ ವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.

ಮೃತರು ಪತ್ನಿ ಸೂಸಮ್ಮ, ಪುತ್ರ ಆಂಟೋ ಜೋಸ್, ಸೊಸೆ ಸೀನ, ಸಹೋದರ-ಸಹೋದರಿಯರಾದ ಬೇಬಿ, ತಂಗಚ್ಚ, ಬೆನ್ನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಪುತ್ರ ಸಿಂಟೋ ಎಂಬವರು ಈ ಹಿಂದೆ ಗಲ್ಫ್‌ನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದರು.

RELATED NEWS

You cannot copy contents of this page